ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls | 5ನೇ ಹಂತದಲ್ಲಿ ಕಡಿಮೆ, 4ನೇ ಹಂತದಲ್ಲಿ ಹೆಚ್ಚು ಮತದಾನ

Published 28 ಮೇ 2024, 15:31 IST
Last Updated 28 ಮೇ 2024, 15:31 IST
ಅಕ್ಷರ ಗಾತ್ರ

ನವದೆಹಲಿ: 2024ರ ಲೋಕಸಭಾ ಚುನಾವಣೆಯ 6 ಹಂತಗಳ ಮತದಾನದ ಪೈಕಿ ನಾಲ್ಕನೇ ಹಂತದಲ್ಲಿ ಅತಿಹೆಚ್ಚು ಮತದಾನವಾಗಿದ್ದು, ಐದನೇ ಹಂತದಲ್ಲಿ ಅತಿ ಕಡಿಮೆ ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

ಚುನಾವಣೆ ಆಯೋಗವು ಮಂಗಳವಾರ 6ನೇ ಹಂತದ ಮತದಾನದ ಪ್ರಮಾಣವನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ 58 ಕ್ಷೇತ್ರಗಳಲ್ಲಿ ಮೇ 25ರಂದು ನಡೆದ ಆರನೇ ಹಂತದಲ್ಲಿ ಶೇ 63ರಷ್ಟು ಪ್ರಮಾಣದ ಮತದಾನ ದಾಖಲಾಗಿದೆ. ಮೇ 13ರಂದು 10 ರಾಜ್ಯಗಳ 86 ಕ್ಷೇತ್ರಗಳಲ್ಲಿ ನಡೆದ ನಾಲ್ಕನೇ ಹಂತದಲ್ಲಿ ಶೇ 69.16ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು ಎಂದು ಅಂಕಿಅಂಶಗಳು ಹೇಳುತ್ತವೆ. 

ಇನ್ನು ಮೇ 20ರಂದು ನಡೆದ ಐದನೇ ಹಂತದಲ್ಲಿ ಶೇ 62.20ರಷ್ಟು ಮತದಾನವಾಗಿದ್ದು, ಇದು ಈವರೆಗಿನ ಅತಿಕಡಿಮೆ ಮತದಾನ ಎಂದು ಆಯೋಗ ತಿಳಿಸಿದೆ. ಮೊದಲ ಹಂತದಲ್ಲಿ ಶೇ 66.14, ಎರಡನೇ ಹಂತದಲ್ಲಿ 66.71 ಹಾಗೂ ಮೂರನೇ ಹಂತದಲ್ಲಿ 65.68ರಷ್ಟು ಮತದಾನ ದಾಖಲಾಗಿತ್ತು. ಜೂನ್ ಒಂದರಂದು ಕೊನೆಯ ಹಾಗೂ 7ನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT