ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಲಿತ ಯುವತಿ ಸಾವು: ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ

Published 28 ಮೇ 2024, 12:48 IST
Last Updated 28 ಮೇ 2024, 12:48 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಪ್ರದೇಶದಲ್ಲಿ ದಲಿತ ಯುವತಿಯ ಶಂಕಾಸ್ಪದ ಸಾವು ಕುರಿತಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ರಾಹು‌ಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ನೆಲದ ಕಾನೂನುಗಳಿಗೆ ಅಂತ್ಯವಾಡಿದ್ದಾರೆ ಎಂದು ಟೀಕಿಸಿದ್ದಾರೆ.

ದಮನ ಪ್ರವೃತ್ತಿಯ ವಿರುದ್ಧ ಅತಿ ದುರ್ಬಲ ವ್ಯಕ್ತಿಯು ಧ್ವನಿ ಎತ್ತುವಂತಹ ವ್ಯವಸ್ಥೆಯನ್ನು ನಾವು ರೂಪಿಸಲಿದ್ದೇವೆ ಎಂದು ‘ಎಕ್ಸ್’ ಜಾಲತಾಣದಲ್ಲಿ ಅವರು ಪ್ರತಿಪಾದಿಸಿದ್ದಾರೆ. 

ದಲಿತ ಯುವತಿ ಸಾವು ನೋವುಂಟು ಮಾಡಿದೆ. ದಲಿತ ಕುಟುಂಬಕ್ಕೆ ಬಿಜೆಪಿ ನಾಯಕರು ಏನು ಮಾಡಿರಬಹುದು ಎಂಬುದನ್ನು ನೆನಪಿಸಿಕೊಂಡರೆ ನೋವಾಗಲಿದೆ. ಬಿಜೆಪಿ ಸರ್ಕಾರಕ್ಕೆಇದು ನಾಚಿಕೆಗೇಡಿನ ಸಂಗತಿ. ಸರ್ಕಾರ ಎಂದಿಗೂ ಆರೋಪಿಗಳ ಪರವಾಗಿಯೇ ನಿಲ್ಲಲಿದ್ದು, ನೊಂದವರನ್ನು ಕಡೆಗಣಿಸಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT