ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್: 100–119 ವರ್ಷ ವಯಸ್ಸಿನ 5,000 ಮತದಾರರು; 120 ಮೀರಿದ 200 ಮಂದಿ

Published 21 ಮಾರ್ಚ್ 2024, 15:41 IST
Last Updated 21 ಮಾರ್ಚ್ 2024, 15:41 IST
ಅಕ್ಷರ ಗಾತ್ರ

ಚಂಡೀಗಢ: ಪಂಜಾಬ್ ರಾಜ್ಯದಲ್ಲಿ 100 ರಿಂದ 119 ವರ್ಷ ವಯಸ್ಸಿನ 5,004 ಮತದಾರರು, 120 ವರ್ಷಕ್ಕೂ ಅಧಿಕ ವಯಸ್ಸಿನ 205 ಮತದಾರರು ಇದ್ದಾರೆ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಸಿಬಿನ್. ಸಿ ತಿಳಿಸಿದ್ದಾರೆ.

ಭಾರತದ ಚುನಾವಣಾ ಆಯೋಗದ ನಿರ್ದೇಶನದ ಅನ್ವಯ, 85 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಲ್ಲಿ ಮತದಾನ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ. ಮತದಾನದ ಪ್ರಮಾಣ ಹೆಚ್ಚಿಸುವ ಕ್ರಮ ಇದಾಗಿದೆ. ಈ ಬಗ್ಗೆ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

100ರಿಂದ 119 ವರ್ಷ ವಯಸ್ಸಿನ 5,004 ಮತದಾರರ ಪೈಕಿ 1,917 ಪುರುಷರು ಮತ್ತು 2,928 ಮಂದಿ ಮಹಿಳಾ ಮತದಾರರು 100ರಿಂದ 109 ವರ್ಷ ವಯಸ್ಸಿನವರಾಗಿದ್ದಾರೆ. 59 ಪುರುಷ ಮತ್ತು 100 ಮಹಿಳಾ ಮತದಾರರು 110ರಿಂದ 119 ವರ್ಷ ವಯಸ್ಸಿನವರಾಗಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

120 ವರ್ಷ ಮೇಲ್ಪಟ್ಟ 205 ಮತದಾರರ ಪೈಕಿ, 122 ಪುರುಷರು ಮತ್ತು 83 ಮಹಿಳಾ ಮತದಾರರಿದ್ದಾರೆ.

ಲುಧಿಯಾನ ಜಿಲ್ಲೆಯಲ್ಲಿ ಅಧಿಕ ಪ್ರಮಾಣದ ವೃದ್ಧ ಮತದಾರರಿದ್ದಾರೆ. 120 ವರ್ಷ ಮೇಲ್ಪಟ್ಟ 77 ಮಂದಿ ಪುರುಷ ಮತ್ತು 34 ಮಂದಿ ಮಹಿಳಾ ಮತದಾರರಿದ್ದಾರೆ.

18ರಿಂದ 19 ವರ್ಷ ವಯಸ್ಸಿನ 4,89,631 ಮಂದಿ ಮತದಾರರಿದ್ದು, ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ. ಈ ಪೈಕಿ, 2,93,100 ಮಂದಿ ಪುರುಷ, 1,96,515 ಮಂದಿ ಮಹಿಳಾ ಮತದಾರರಿದ್ದಾರೆ.

ಪಂಜಾಬ್‌ನಲ್ಲಿ 2,12,71,246 ಮತದಾರರಿದ್ದು, 1,11,92,959 ಮಂದಿ ಪುರುಷ ಮತ್ತು 1,00,77,543 ಮಂದಿ ಮಹಿಳಾ ಮತದಾರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT