ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ನದಿಯಲ್ಲಿ ಮುಳುಗಿದ ಮತಯಂತ್ರವಿದ್ದ ಕಾರು

Published 19 ಏಪ್ರಿಲ್ 2024, 14:04 IST
Last Updated 19 ಏಪ್ರಿಲ್ 2024, 14:04 IST
ಅಕ್ಷರ ಗಾತ್ರ

ಉತ್ತರ ಲಖೀಂಪುರ: ವಿದ್ಯುನ್ಮಾನ ಮತಯಂತ್ರಗಳನ್ನು ಹೊತ್ತು ತರುತ್ತಿದ್ದ ಕಾರಿನ ಬಹುಭಾಗವು ನದಿಯಲ್ಲಿ ಮುಳುಗಿದ ಪ್ರಕರಣ ಅಸ್ಸಾಂನ ಲಖೀಂಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಈ ಕುರಿತು ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಸಾದಿಯಾ ಪಟ್ಟಣದ ಅಮರಪುರ ಪ್ರದೇಶದ ಮತಗಟ್ಟೆಯೊಂದರಲ್ಲಿ ಮತದಾನ ಪ್ರಕ್ರಿಯೆಯ ವೇಳೆ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಹೀಗಾಗಿ ಕಾರಿನಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ತರಿಸಿಕೊಳ್ಳಲಾಗುತ್ತಿತ್ತು. ದೇವಪಾನಿ ನದಿಯಲ್ಲಿ ಇವಿಎಂ ಇರುವ ಕಾರನ್ನು ಬೋಟ್‌ನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಳವಾದ ಕಾರಣ ಹಡಗಿನ ಕೆಲ ಭಾಗವು ಮಗುಚಿಕೊಂಡಿತು. ಆಗ ಕಾರಿನ ಸ್ವಲ್ಪ ಭಾಗವು ನದಿಯಲ್ಲಿ ಮುಳುಗಿತ್ತು. ಈ ವೇಳೆ ಕಾರಿನ ಚಾಲಕ ಮತ್ತು ಚುನಾವಣಾಧಿಕಾರಿ ಕಾರಿನಿಂದ ಹೊರಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT