ಅಲ್ಲದೇ, ದೋಷಪೂರಿತ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ (ಇವಿಎಂ) ಈ ಮೊದಲು ತಮ್ಮ ಮತ ಚಲಾಯಿಸಿದ ಸುಮಾರು 28 ಜನರಿಗೆ ಮರು ಮತದಾನಕ್ಕೆ ಅನುಮತಿ ನೀಡಲು ಚುನಾವಾಣಾ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇತರೆಡೆಗಳಲ್ಲೂ ಕೈಕೊಟ್ಟ ಯಂತ್ರ: ನವದೆಹಲಿ ವರದಿ(ಪಿಟಿಐ): ಮಹಾರಾಷ್ಟವಲ್ಲದೆ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಿಹಾರಿನ ಹಲವು ಕ್ಷೇತ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ದೋಷಗಳು ಕಾಣಿಸಿಕೊಂಡ ಬಗ್ಗೆ ವರದಿಗಳು ಬಂದಿವೆ.