ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ನಾಮಪತ್ರ ಸಲ್ಲಿಕೆಗೆ ತೆರೆ: 22 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Published 5 ಏಪ್ರಿಲ್ 2024, 5:31 IST
Last Updated 5 ಏಪ್ರಿಲ್ 2024, 5:31 IST
ಅಕ್ಷರ ಗಾತ್ರ

ತುಮಕೂರು: ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ತೆರೆ ಬಿದ್ದಿದ್ದು, ಈವರೆಗೆ ಒಟ್ಟು 22 ಅಭ್ಯರ್ಥಿಗಳು 31 ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ನಿಂದ ಎಸ್‌.ಪಿ.ಮುದ್ದಹನುಮೇಗೌಡ, ಬಿಜೆಪಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ಸೇರಿದಂತೆ 22 ಮಂದಿ ಕಣದಲ್ಲಿ ಇದ್ದಾರೆ. ಏ. 5ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ. 8ರ ಒಳಗೆ ವಾಪಸ್ ಪಡೆಯಲು ಅವಕಾಶವಿದೆ.

ಗುರುವಾರ ಒಂದೇ ದಿನ 11 ಮಂದಿ 15 ನಾಮಪತ್ರ ಸಲ್ಲಿಸಿದ್ದಾರೆ. ಕನ್ನಡ ಪಕ್ಷ ಅಭ್ಯರ್ಥಿಯಾಗಿ ಎಚ್.ಬಿ.ಎಂ.ಹಿರೇಮಠ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಪ್ರದೀಪ್ ಕುಮಾರ್, ಲೋಕಶಕ್ತಿಯಿಂದ ಆರ್.ಎಸ್.ರಂಗನಾಥ, ಪಕ್ಷೇತರ ಅಭ್ಯರ್ಥಿಗಳಾಗಿ ಎಚ್.ಎನ್.ಮೋಹನ್ ಕುಮಾರ್, ಎಚ್.ಎಸ್.ನೀಲಕಂಟೇಶ, ಜೆ.ಕೆ.ಸಮಿ, ಮಲ್ಲಿಕಾರ್ಜುನಯ್ಯ, ವಿ.ಪ್ರಭಾಕರ್, ಆರ್.ಪುಷ್ಪ, ಕೆ.ಹುಚ್ಚೇಗೌಡ ನಾಮಪತ್ರ ಸಲ್ಲಿಸಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT