ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಕಳಸಾ–ಬಂಡೂರಿಗೆ ಅನುಮತಿ: ಸಿದ್ದರಾಮಯ್ಯ

Published 2 ಮೇ 2024, 16:25 IST
Last Updated 2 ಮೇ 2024, 16:25 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗುತ್ತಿದ್ದಂತೆಯೆ ಕಳಸಾ–ಬಂಡೂರಿ ಯೋಜನೆಗೆ ಅನುಮತಿ ನೀಡಿ, ಕೆಲಸ ಆರಂಭಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಗುರುವಾರ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕಳಸಾ–ಬಂಡೂರಿ ನಾಲಾ ಜಾರಿ ಆಗದಿರುವುದಕ್ಕೆ ಕೇಂದ್ರವೇ ಕಾರಣ. ಟೆಂಡರ್‌ ಕರೆದಿದ್ದರೂ, ಪರಿಸರ ಇಲಾಖೆ ಅನುಮತಿ ಕೊಟ್ಟಿಲ್ಲ. ಇದರ ಬಗ್ಗೆ ಯಾವತ್ತಾದರೂ ಗದ್ದಿಗೌಡರ ಮಾತನಾಡಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಗೋವಾ, ಕರ್ನಾಟಕ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದಾಗಲೂ ಇತ್ಯರ್ಥ ಮಾಡಲಿಲ್ಲ. ಅವರು ಯಾವತ್ತೂ ಜನರ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ನೋಟಿಫಿಕೇಷನ್‌ ಆಗಿಲ್ಲ. ನೋಟಿಫಿಕೇಷನ್‌ ಕೊಡಿಸುವ ಕೆಲಸವನ್ನೂ ಮಾಡುತ್ತೇವೆ’ ಎಂದರು.  

‘ಸುಳ್ಳು ಹೇಳುವುದಕ್ಕೂ ಇತಿ–ಮಿತಿ ಇರಬೇಕು. ಬಜೆಟ್‌ನಲ್ಲಿ ₹56 ಸಾವಿರ ಕೋಟಿ ಗ್ಯಾರಂಟಿಗೆ, ₹68 ಸಾವಿರ ಕೋಟಿ ಅಭಿವೃದ್ಧಿಗೆ ತೆಗೆದಿರಿಸಿದ್ದೇನೆ. ಗ್ಯಾರಂಟಿ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಲೂಟಿ ಹೊಡೆಯುತ್ತಾರೆ ಎಂದಿದ್ದಾರೆ. ನಾವು ಲೂಟಿ ಹೊಡೆಯಲು ಬಂದಿಲ್ಲ. ಬಿಜೆಪಿಯವರೇ ಲೂಟಿ ಹೊಡೆದಿದ್ದಾರೆ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT