ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನಂತೆ ಶೆಟ್ಟರ್‌ ಅವರಿಗೂ ಬೆಂಬಲ ನೀಡಿ: ಮಂಗಲಾ ಅಂಗಡಿ

Published 24 ಮಾರ್ಚ್ 2024, 17:04 IST
Last Updated 24 ಮಾರ್ಚ್ 2024, 17:04 IST
ಅಕ್ಷರ ಗಾತ್ರ

ಬೆಳಗಾವಿ: ‘ಬಿಜೆಪಿ ಕಾರ್ಯಕರ್ತರು ಈವರೆಗೆ ಅಂಗಡಿ ಕುಟುಂಬ ಬೆಂಬಲಿಸುತ್ತ ಬಂದಿದ್ದಾರೆ. ಅವರ ಪ್ರೀತಿಯಿಂದಾಗಿಯೇ ನಾನೂ ಆಯ್ಕೆಯಾಗಿದ್ದೇನೆ. ನನ್ನಂತೆ ಜಗದೀಶ ಶೆಟ್ಟರ್‌ ಅವರಿಗೂ ಬೆಂಬಲ ನೀಡಿ’ ಎಂದು ಸಂಸದೆ ಮಂಗಲಾ ಅಂಗಡಿ ಕೋರಿದರು.

ಇಲ್ಲಿ ಭಾನುವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂದು ಸಂಜೆ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕರೆ ಮಾಡಿ, ಶೆಟ್ಟರ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು. ನಡ್ಡಾ ಅವರು ಇತ್ತೀಚೆಗೆ ನಮ್ಮ ಮನೆಗೆ ಭೇಟಿ ನೀಡಿದಾಗ, ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂದಿದ್ದೆ. ಈಗ ನಮ್ಮ‌ ಕುಟುಂಬಕ್ಕೆ ಟಿಕೆಟ್ ಸಿಕ್ಕಿದೆ’ ಎಂದರು.

‘ಪಕ್ಷದ ಹೈಕಮಾಂಡ್‌ ಕೈಗೊಂಡ ನಿರ್ಧಾರವನ್ನು ಕಾರ್ಯಕರ್ತರು ಪಾಲಿಸುತ್ತಾರೆ. ನಾನು ರಾಜಕೀಯ ಪ್ರಾತಿನಿಧ್ಯ ಈಗೇನೂ ಕೇಳಿಲ್ಲ. ಮುಂದೆ ನೋಡೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT