ಹೊತ್ತಿ ಉರಿದ ವಿದ್ಯುತ್ ಕಂಬ

7

ಹೊತ್ತಿ ಉರಿದ ವಿದ್ಯುತ್ ಕಂಬ

Published:
Updated:
Deccan Herald

ಬೆಂಗಳೂರು: ನಾಗವಾರ ಸಮೀಪದ ಎಂಎಸ್ಆರ್ ಎಲಿಮೆಂಟ್ಸ್ ಮಾಲ್ ಬಳಿಯ ವಿದ್ಯುತ್‌ ಕಂಬಕ್ಕೆ ಗುರುವಾರ ರಾತ್ರಿ ಬೆಂಕಿ ಹೊತ್ತಿಕೊಂಡು, ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿತ್ತು.

ಕಾಲುವೆ ಪಕ್ಕವೇ ಇರುವ ಕಂಬದಲ್ಲಿ ವಿದ್ಯುತ್ ಶಾರ್ಟ್‌ ಸರ್ಕೀಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು ಎನ್ನಲಾಗಿದೆ. ಬೆಂಕಿ ಕೆನ್ನಾಲಗೆ ಹೆಚ್ಚಾಗಿ, ಕಂಬದ ಪಕ್ಕದಲ್ಲಿದ್ದ ಕಸದ ರಾಶಿಗೂ ವ್ಯಾಪಿಸಿತ್ತು. ಅದರಿಂದಾಗಿ ಬೆಂಕಿ ಜೋರಾಗಿ ಉರಿಯಿತು.

‘ಅದೇ ಮಾರ್ಗವಾಗಿ ಹೊರಟಿದ್ದ ಖಾಸಗಿ ಬಸ್ಸಿಗೂ ಕಿಡಿ ಸಿಡಿದು, ಬೆಂಕಿ ಹೊತ್ತಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಅಪಾಯದ ಮುನ್ಸೂಚನೆ ಅರಿತ ಚಾಲಕ, ಸ್ಥಳದಲ್ಲೇ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ. ನಂತರ, ಸಾರ್ವಜನಿಕರ ಸಹಾಯದಿಂದ ಬಸ್‌ನ್ನು ಸ್ಥಳದಿಂದ ತೆರವುಗೊಳಿಸಿದ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಂಬ ಅಳವಡಿಸಿ ಹಲವು ವರ್ಷಗಳಾಗಿದ್ದು, ತಂತಿಗಳು ಜೋತು ಬಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಬೆಸ್ಕಾಂನವರ ನಿರ್ಲಕ್ಷ್ಯದಿಂದಲೇ ಈಗ ಘಟನೆ ಸಂಭವಿಸಿದೆ’ ಎಂದು ಸ್ಥಳೀಯರು ದೂರಿದರು. 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 6

  Angry

Comments:

0 comments

Write the first review for this !