ಸುವರ್ಣ ತ್ರಿಭುಜ ದೋಣಿಗೆ ಡಿಕ್ಕಿ: ತನಿಖೆಗಾಗಿ ನೌಕಾಪಡೆಗೆ ಪತ್ರ- ಎಂ.ಬಿ.ಪಾಟೀಲ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ಸುವರ್ಣ ತ್ರಿಭುಜ ದೋಣಿಗೆ ಡಿಕ್ಕಿ: ತನಿಖೆಗಾಗಿ ನೌಕಾಪಡೆಗೆ ಪತ್ರ- ಎಂ.ಬಿ.ಪಾಟೀಲ

Published:
Updated:

ವಿಜಯಪುರ: ‘ಸೇನಾ ನೌಕೆಯೊಂದು ಸುವರ್ಣ ತ್ರಿಭುಜ ದೋಣಿಗೆ ಡಿಕ್ಕಿ ಹೊಡೆದು ನಾಶವಾಗಿದೆ ಎಂಬ ಶಂಕೆಯಿದೆ. ಈ ಕುರಿತಂತೆ ತನಿಖೆ ನಡೆಸುವಂತೆ ನೌಕಾಪಡೆಗೆ ಪತ್ರ ಬರೆಯಲಾಗುವುದು’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

‘ಸಚಿವ ಸಂಪುಟದ ಸಭೆ ಗುರುವಾರ ನಡೆಯಲಿದ್ದು, ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಆಂತರಿಕ ಭದ್ರತೆ ಡಿಜಿ ಮೂಲಕ ಪತ್ರ ಕಳುಹಿಸಲಾಗುವುದು’ ಎಂದು ಬುಧವಾರ ವಿಜಯಪುರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ಸುವರ್ಣ ತ್ರಿಭುಜ ದೋಣಿಯ ಅವಶೇಷ ಪತ್ತೆಯಾಗಿದೆ. ಮೀನುಗಾರರಿಗೆ ಸಂಬಂಧಿಸಿದಂತೆ ಯಾವುದೇ ಸುಳಿವು ಇದೂವರೆಗೂ ಸಿಗದಾಗಿದೆ’ ಎಂದು ಹೇಳಿದರು.

ಬಾಗಿಲು ತಟ್ಟಿಲ್ಲ

‘ಮನಸ್ಸಿಗೆ ನೋವಾಗಿದ್ದಾಗಲೂ ಸಹ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಬಿಜೆಪಿಯ ಯಾವೊಬ್ಬ ಮುಖಂಡರ ಜತೆ ಮಾತನಾಡಿಲ್ಲ. ಯಾರ ಮನೆಯ ಬಾಗಿಲು ತಟ್ಟಿಲ್ಲ’ ಎಂದು ಎಂ.ಬಿ.ಪಾಟೀಲ ತಿರುಗೇಟು ನೀಡಿದರು.

‘ಯತ್ನಾಳ ಆಹ್ವಾನಕ್ಕೆ ನೋ ಥ್ಯಾಂಕ್ಸ್‌. ಅವರ ಹೇಳಿಕೆಗಳಿಗೆ ನೋ ಕಾಮೆಂಟ್ಸ್‌’ ಎಂದ ಪಾಟೀಲ, ‘ಸ್ನೇಹ ಬೇರೆ, ರಾಜಕಾರಣವೇ ಬೇರೆ. ನಾ ಎಂದಾದರೂ ಬಿಜೆಪಿಗೆ ಸೇರುತ್ತೇನೆ ಎಂದು ಹೇಳಿದ್ದೇನಾ ? ಇಲ್ಲ ಅರ್ಜಿ ಹಾಕಿನಾ’ ಎಂದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !