ಸೋಮವಾರ, ಜೂನ್ 14, 2021
20 °C

ಸೆಟ್ಟೇರಿದ್ದಾರೆ ‘ಎರಡು ಸಾವಿರದ ಇಪ್ಪತ್ತು ಗೋಪಿಕೆಯರು’

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ನಿವೃತ್ತ ಐ.ಪಿ.ಎಸ್ ಅಧಿಕಾರಿ ಕುಚ್ಚಣ್ಣ ಶ್ರೀನಿವಾಸನ್ ಮತ್ತು ಹಲವು ಸಚಿವರಿಗೆ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ವಿ.ನಾರಾಯಣಸ್ವಾಮಿ ಈಗ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಕುಚ್ಚಣ್ಣ ಅವರ ನಿರ್ಮಾಣದ ಸಿನಿಮಾವನ್ನು ನಾರಾಯಣ ಸ್ವಾಮಿ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹೆಸರು ‘ಎರಡು ಸಾವಿರದ ಇಪ್ಪತ್ತು ಗೋಪಿಕೆಯರು’. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚನೆಯಲ್ಲಿ ನಿರ್ಮಾಪಕ, ನಿರ್ದೇಶಕ ಇಬ್ಬರೂ ಸೇರಿದ್ದಾರೆ.

1988ರಲ್ಲಿ ವಿ. ನಾರಾಯಣಸ್ವಾಮಿ ಅವರ ನಿರ್ದೇಶನದಲ್ಲಿ ಬಂದ ರಮೇಶ್‌ ಅರವಿಂದ್‌ ನಟನೆಯ ಮೊದಲ ಚಿತ್ರ ‘ಮಧುಮಾಸ’ಕ್ಕೂ ಕುಚ್ಚಣ್ಣ ಕಥೆ, ಸಾಹಿತ್ಯ ಬರೆದಿದ್ದರು. 1993 ರಲ್ಲಿ ‘ಮೋಜಿನ ಮದುವೆ’ ಎಂಬ ಚಲನಚಿತ್ರವನ್ನೂ ಸಹ ವಿ.ನಾರಾಯಣಸ್ವಾಮಿ ಅವರ ನಿರ್ದೇಶನದಲ್ಲಿ, ಕುಚ್ಚಣ್ಣ ಶ್ರೀನಿವಾಸನ್ ಅವರ ಕಥೆ, ಸಾಹಿತ್ಯದಲ್ಲಿ ನಿರ್ಮಾಣಗೊಂಡಿತ್ತು. ‘ಸಮಾಗಮ’ ಎಂಬ ದೂರದರ್ಶನ ಧಾರಾವಾಹಿ ಸೇರಿದಂತೆ ಹಲವು ನಾಟಕಗಳಲ್ಲಿ ಇಬ್ಬರೂ ಜೊತೆಯಾಗಿದ್ದರು. ಇದೀಗ 28 ವರ್ಷಗಳ ನಂತರ ಈ ಜೋಡಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು