ಅಭಿಮಾನಿಗಳಿಗೆ ಸುಷ್ಮಿತಾ ತರಾಟೆ

ಸೋಮವಾರ, ಜೂಲೈ 22, 2019
27 °C

ಅಭಿಮಾನಿಗಳಿಗೆ ಸುಷ್ಮಿತಾ ತರಾಟೆ

Published:
Updated:

ನಟಿ ಸುಷ್ಮಿತಾ ಸೇನ್‌ ಹಾಗೂ ಅವರ ಗೆಳೆಯ ರೋಹ್ಮನ್‌ ಶಾಲ್‌ ನಡುವೆ ಬ್ರೇಕ್‌ಅಪ್‌ ಆಗಿದೆ ಎಂದು ಟ್ವಿಟರ್‌ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸುತ್ತಿದ್ದವರಿಗೆ ಸುಷ್ಮಿತಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಭಿಮಾನಿಗಳನ್ನು ನಾನು ಪ್ರೀತಿಸುತ್ತೇನೆ. ಆದರೆ ಗಾಳಿ ಸುದ್ದಿ ಹಬ್ಬಿಸಬೇಡಿ ಎಂದು ಹೇಳಿರುವ ಅವರು. ರೋಹ್ಮನ್‌ ಶಾಲ್‌ ಜೊತೆಗೆ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವಾಗ ತೆಗೆದ ಚಿತ್ರವೊಂದನ್ನು ಪೋಸ್ಟ್‌ ಮಾಡಿ, ಖಡಕ್‌ ಶೀರ್ಷಿಕೆಯೊಂದನ್ನೂ ಬರೆದಿದ್ದಾರೆ.

‘ನೋಡಿ ರೋಹ್ಮನ್‌ ನನ್ನ ಜೊತೆ ಇದ್ದಾರೆ. ಐ ಲವ್‌ ಹಿಮ್‌, ಜಿಮ್‌ನಲ್ಲಿ ವರ್ಕ್ಔಟ್‌# ಹೋಮ್‌#ದುಬೈ, ನಾನು ನಿಮ್ಮನ್ನು ಪ್ರೀತಿಸುತ್ತೇನೆ. ಬಾಸ್‌ ರೀತಿಯಲ್ಲಿ ಕೆಟ್ಟ ವಿಚಾರಗಳನ್ನು ಹಂಚಿಕೊಳ್ಳಬೇಡಿ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

Post Comments (+)