ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬರ್ತಿದ್ದಾನೆ ಗಣಿ!

Published 22 ಫೆಬ್ರುವರಿ 2024, 20:09 IST
Last Updated 22 ಫೆಬ್ರುವರಿ 2024, 20:09 IST
ಅಕ್ಷರ ಗಾತ್ರ

‘ನಮ್‌ ಗಣಿ ಬಿ.ಕಾಂ ಪಾಸ್‌’ ಚಿತ್ರದ ನಿರ್ದೇಶಕ ಅಭಿಷೇಕ್‌ ಶೆಟ್ಟಿ ಸದ್ಯ ತಮ್ಮ ಹೊಸ ಚಿತ್ರ ‘ಆರಾಮ್‌ ಅರವಿಂದ ಸ್ವಾಮಿ’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಜೊತೆಗೆ ತಮ್ಮದೇ ಹೊಸ ಚಿತ್ರವೊಂದನ್ನು ಅಭಿಷೇಕ್‌ ಘೋಷಿಸಿದ್ದಾರೆ.

ಅಭಿಷೇಕ್ ಶೆಟ್ಟಿ‌ ‘ನಮ್ ಗಣಿ ಬಿ.ಕಾಂ‌ ಪಾಸ್’ ಚಿತ್ರದ ಮೂಲಕ ನಟನಾಗಿ ಹಾಗೂ ನಿರ್ದೇಶಕರಾಗಿ ಚಂದನವನಕ್ಕೆ ಕಾಲಿಟ್ಟರು. ಬಳಿಕ ‘ಗಜಾನನ ಆ್ಯಂಡ್‌ ಗ್ಯಾಂಗ್’ ಚಿತ್ರ ನಿರ್ದೇಶಿಸಿದರು. ಇದೀಗ ‘ನಮ್ ಗಣಿ ಬಿ.ಕಾಂ ಪಾಸ್’ ಸೀಕ್ವೆಲ್‌ನಲ್ಲಿ ಮಿಂಚಲು ಅಭಿಷೇಕ್‌ ಸಜ್ಜಾಗಿದ್ದಾರೆ. ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಸೂಟು ಬೂಟು ತೊಟ್ಟು, ಕೈಯಲ್ಲಿ ಕಾಫಿ ಕಪ್ ಬನ್ ಹಿಡಿದು ದುಬಾರಿ ಕಾರಿನ ಮುಂದೆ ಸ್ಟೈಲಿಷ್‌ ಆಗಿ ಅಭಿ ಪೋಸ್ ನೀಡಿದ್ದಾರೆ. ಈ ಚಿತ್ರಕ್ಕೆ ಅದ್ವಿ ಕ್ರಿಯೇಷನ್‌ನಡಿ ಪ್ರಶಾಂತ್ ಹಣ ಹೂಡುತ್ತಿದ್ದು, ಸುಮಂತ್ ಆಚಾರ್ಯ ಕ್ಯಾಮೆರಾ ಹಿಡಿಯಲಿದ್ದಾರೆ. ಉಮೇಶ್ ಆರ್. ಬಿ. ಸಂಕಲನ, ಆನಂದ್ ರಾಜವಿಕ್ರಂ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸಿನಿಮಾದ ಕಥೆ ಬರವಣಿಗೆ ಹಂತದಲ್ಲಿದೆ ಎಂದಿದ್ದಾರೆ ಅಭಿಷೇಕ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT