ಭರ್ಜರಿಯಾಗಿದೆ ‘ಹೊಯ್ಸಳ’ನ ಎಂಟ್ರಿ!

ನಟ ಧನಂಜಯ ನಟನೆಯ 25ನೇ ಸಿನಿಮಾ, ವಿಜಯ್ ಎನ್. ನಿರ್ದೇಶಿಸಿರುವ ‘ಹೊಯ್ಸಳ’ದ ಟೀಸರ್ ಬಿಡುಗಡೆಯಾಗಿದೆ. ಪೊಲೀಸ್ ಅಧಿಕಾರಿಯಾಗಿ ಇಲ್ಲಿ ಧನಂಜಯ್ ಮಿಂಚಿದ್ದಾರೆ.
ಧನಂಜಯ ಅವರು ‘ಗುರುದೇವ್ ಹೊಯ್ಸಳ’ ಎಂಬ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಒಳ್ಳೆಯವನಾ ಕೆಟ್ಟವನಾ ಜಡ್ಜ್‌ಮೆಂಟ್‌ಗೇ ಸಿಗವಲ್ದು ಆದರ ಮಂದಿಗೆ ಭಾಳ ಫೇವರೇಟ್ ಅದನಾ’ ಎನ್ನುವ ಡೈಲಾಗ್ ಪಾತ್ರದ ವಿವರಣೆಯನ್ನು ನೀಡಿದೆ. ಕೆ.ಆರ್.ಜಿ ಸ್ಟುಡಿಯೊಸ್‌ನಡಿ ನಿರ್ಮಾಣವಾಗಿರುವ ಈ ಚಿತ್ರದ ಟೀಸರ್ ಅನ್ನು ಈಗಾಗಲೇ ಸಿನಿಮಾಗಳಲ್ಲಿ ಖಡಕ್ ಪೊಲೀಸ್ ಅಧಿಕಾರಿಗಳಾಗಿ ನಟಿಸಿದ ನಟರಾದ ‘ಕಿಚ್ಚ’ ಸುದೀಪ್, ಮಲಯಾಳಂನ ಪೃಥ್ವಿರಾಜ್ ಹಾಗೂ ತಮಿಳಿನ ಕಾರ್ತಿ ಬಿಡುಗಡೆ ಮಾಡಿದರು. ಸಿನಿಮಾ ಮಾ.30ರಂದು ಬಿಡುಗಡೆಯಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.