ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

₹150 ಕೋಟಿ ವೆಚ್ಚದ ಹೊಸ ಮನೆ ಪ್ರವೇಶಿಸಿದ ನಟ ಧನುಷ್‌

Last Updated 20 ಫೆಬ್ರುವರಿ 2023, 10:45 IST
ಅಕ್ಷರ ಗಾತ್ರ

ತಮಿಳು ನಟ ಧನುಷ್ ಚೆನ್ನೈನ ಪೋಯಿಸ್ ಗಾರ್ಡನ್​​ನಲ್ಲಿ ಕಟ್ಟಿಸಿರುವ ನೂತನ ಮನೆ ಪ್ರವೇಶಿಸಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ತಮ್ಮ ಪೋಷಕರಿಗಾಗಿ ಧನುಷ್‌ ಈ ಮನೆಯನ್ನು ಸುಮಾರು ₹150 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿ ಉಡುಗೊರೆಯಾಗಿ ನೀಡಿದ್ದಾರೆ.

ಇತ್ತೀಚೆಗಷ್ಟೇ ನೂತನ ಮನೆಯ ಗೃಹ ಪ್ರವೇಶ ನೆರವೇರಿದೆ. ಗೃಹಪ್ರವೇಶದ ಸಂದರ್ಭದಲ್ಲಿ ಧನುಷ್ ಅವರು ನೀಲಿ ಬಣ್ಣದ ಕುರ್ತಾ ಹಾಗೂ ಬಿಳಿ ಬಣ್ಣದ ಪೈಜಾಮ ಧರಿಸಿ ಮಿಂಚಿದ್ದಾರೆ. ಈ ಫೋಟೋಗಳನ್ನು ಧನುಷ್‌ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಶುಭ ಕೋರಿದ್ದಾರೆ.

ಧನುಷ್‌ ತಂದೆ–ತಾಯಿ ಕೂಡ ಚಿತ್ರದಲ್ಲಿದ್ದಾರೆ. ರಜನಿಕಾಂತ್‌ ದಂಪತಿ ಕೂಡ ಧನುಷ್‌ ಹೊಸ ಮನೆಗೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ ಎಂದು ಅಭಿಮಾನಿಯೊಬ್ಬರು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ತಮ್ಮ ನೆಚ್ಚಿನ ನಟ ಧನುಷ್‌ ಅವರ ಈ ಭವ್ಯ ಬಂಗಲೆ ದೇವಾಲಯದಂತಿದೆ. ತಂದೆ-ತಾಯಿ ಬದುಕಿರುವಾಗಲೇ ಸ್ವರ್ಗದಲ್ಲಿ ಉಳಿಸುವವರನ್ನು ನೋಡಿದರೆ ಅಂಥವರು ದೇವರಂತೆ ಕಾಣುತ್ತಾರೆ. ಅವರ ಮಕ್ಕಳಿಗೆ ಹಾಗೂ ಇತರರಿಗೆ ಮಾದರಿ ಆಗಿ ಕಾಣುತ್ತಾರೆ ಎಂದು ಅಭಿಮಾನಿಯೊಬ್ಬರು ಬರೆದು ಮನೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT