ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Puneeth Rajkumar| ಅಮರ ‘ಅಪ್ಪು’ ಬರ್ತ್‌ಡೇ: ಇಂದು ‘ಸ್ಫೂರ್ತಿ ದಿನ’

Last Updated 16 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನವಿದು (ಮಾರ್ಚ್‌ 17). ಪುನೀತ್‌ ಅವರ ನೆನಪಿನಲ್ಲಿ ರಾಜ್ಯ ಸರ್ಕಾರ ಘೋಷಿಸಿದಂತೆ ಇಂದು ‘ಸ್ಫೂರ್ತಿ ದಿನ’. ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್‌ ಭೌತಿಕವಾಗಿ ನಮ್ಮ ನಡುವಿಲ್ಲದಿದ್ದರೂ ಅವರ ‘ಪವರ್’ ಇನ್ನೂ ಇದೆ. ಇದಕ್ಕೆ ಸಾಕ್ಷ್ಯ ಎಂಬಂತೆ ಚಂದನವನದ ಯಾವುದೇ ಕಾರ್ಯಕ್ರಮವಿರಲಿ ‘ಅಪ್ಪು’ ಎಂಬ ಪದವಿಲ್ಲದೆ ಆರಂಭವಾಗುವುದಿಲ್ಲ; ಕಂಠೀರವ ಸ್ಟುಡಿಯೊದಲ್ಲಿರುವ ಅವರ ಸಮಾಧಿ ಸ್ಥಳವಂತೂ ಅಭಿಮಾನಿಗಳಿಗೆ ದೇವಸ್ಥಾನದಂತಾಗಿದೆ. ಅಪ್ಪು ಅಗಲಿ ವರ್ಷ ಉರುಳಿದರೂ ಇಲ್ಲಿಗೆ ಆಗಮಿಸುವ ‘ಅಭಿಮಾನಿ ದೇವರು’ಗಳ ಸಂಖ್ಯೆ ಇಳಿಮುಖವಾಗಿಲ್ಲ.

ಇವೆಲ್ಲವುಗಳ ನಡುವೆ ‘ಅಪ್ಪು’ವನ್ನು ಅಮರವಾಗಿಸುವ ಕಾರ್ಯಕ್ರಮಗಳನ್ನು ಅಭಿಮಾನಿಗಳು ಆಯೋಜಿಸುತ್ತಿದ್ದಾರೆ. ರಾಜ್ಯದ ಹಲವೆಡೆ ರಕ್ತದಾನ, ಅನ್ನದಾನವೇರ್ಪಡಿಸಿ, ನೇತ್ರದಾನದ ಪ್ರತಿಜ್ಞೆಯನ್ನು ಅಭಿಮಾನಿಗಳು ತೆಗೆದುಕೊಳ್ಳುತ್ತಿದ್ದಾರೆ. ‌ಮಾರ್ಚ್‌ 17ರಂದು ಬಿಡುಗಡೆಯಾಗುತ್ತಿರುವ ‘ಕಬ್ಜ’ ಸಿನಿಮಾವನ್ನು ನಿರ್ದೇಶಕ ಆರ್‌.ಚಂದ್ರು ಅವರು ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅರ್ಪಿಸಿದ್ದಾರೆ. ಜೊತೆಗೆ ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ, ಅಮೋಘವರ್ಷ ನಿರ್ದೇಶನದ ಪುನೀತ್‌ ಪಾಲ್ಗೊಂಡ ಡಾಕ್ಯೂಫಿಲಂ ‘ಗಂಧದಗುಡಿ’ ಇಂದು ಪ್ರೈಂ ವಿಡಿಯೊದಲ್ಲಿ ಸ್ಟ್ರೀಮ್‌ ಆಗಲಿದೆ. ಬೆಂಗಳೂರಿನ ಗಾಂಧಿನಗರದಲ್ಲಿರುವ ಸಂತೋಷ್‌ ಚಿತ್ರಮಂದಿರದಲ್ಲಿ ಅಪ್ಪು ಅಭಿನಯದ ‘ಯುವರತ್ನ’ ಸಿನಿಮಾ ರಿರಿಲೀಸ್‌ ಆಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT