ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಮ್‌ ಆಫ್‌ ಥ್ರೋನ್ಸ್‌ ಖ್ಯಾತಿಯ ನಟ ಡ್ಯಾರೆನ್ ಕೆಂಟ್ ನಿಧನ

ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ನಟ
Published 16 ಆಗಸ್ಟ್ 2023, 11:00 IST
Last Updated 16 ಆಗಸ್ಟ್ 2023, 11:00 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್: ಹಾಲಿವುಡ್‌ನ ಪ್ಯಾಂಟಸಿ ಡ್ರಾಮಾ ಸಿರೀಸ್‌ ‘ಗೇಮ್‌ ಆಫ್‌ ಥ್ರೋನ್ಸ್‌’ ಖ್ಯಾತಿಯ ನಟ ಡ್ಯಾರೆನ್ ಕೆಂಟ್ ಅವರು ನಿಧನರಾಗಿದ್ದಾರೆ.

ವಿಚಿತ್ರ ಕಾಯಿಲೆಯಿಂದ ಹಲವು ವರ್ಷಗಳಿಂದ ಬಳಲುತ್ತಿದ್ದ ಅವರು ತಮ್ಮ 39ನೇ ವಯಸ್ಸಿನಲ್ಲಿ ಆಗಸ್ಟ್ 11 ರಂದು ನಿಧನರಾದರು ಎಂದು ಟ್ಯಾಲೆಂಟ್ ಏಜೆನ್ಸಿ Carey Dodd Associates ‘ಎಕ್ಸ್‌’ ತಾಣದಲ್ಲಿ ತಿಳಿಸಿದೆ.

‘ನಮ್ಮ ನೆಚ್ಚಿನ ಸ್ನೇಹಿತ, ನಟನನ್ನು ಕಳೆದುಕೊಂಡೆವು. ಇದರಿಂದ ಅವರ ತಂದೆ–ತಾಯಿ  ಬಂಧುಗಳಿಗೆ ತೀವ್ರ ದುಃಖವಾಗಿದೆ. ಅವರ ದುಃಖದಲ್ಲಿ ನಾವಿದ್ದೇವೆ. ಹೋಗಿ ಬಾ ಗೆಳೆಯ’ ಎಂದು ಹೇಳಿದೆ.

ಬ್ರಿಟನ್ ಮೂಲದ ಕೆಂಟ್ ಅವರು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದರು. ಕಾಯಿಲೆಯ ಹೆಸರು ಬಹಿರಂಗವಾಗಿರಲಿಲ್ಲ. ‘ಗೇಮ್‌ ಆಫ್‌ ಥ್ರೋನ್ಸ್‌’ ನಲ್ಲಿ ಅವರ ಕುರಿಗಾಹಿ ಪಾತ್ರ ಜನಪ್ರಿಯವಾಗಿತ್ತು.

2008 ರಲ್ಲಿ ಬಿಡುಗಡೆಯಾಗಿದ್ದ ಹಾಲಿವುಡ್‌ನ ಹಾರರ್ ಚಿತ್ರ Mirrorsನಲ್ಲೂ ಅವರ ಪಾತ್ರ ಗಮನ ಸೆಳೆದಿತ್ತು. Marshal's Law ನಲ್ಲಿ ಅಭಿನಯಿಸಿದ್ದರು. Dungeons & Dragons ಅವರ ಇತ್ತೀಚಿನ ಚಿತ್ರವಾಗಿತ್ತು.

ಅವರು ಸಿನಿಮಾಗಳಿಗೆ ಕಥೆ ಹಾಗೂ ಚಿತ್ರಕಥೆಗಳನ್ನೂ ಬರೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT