ಶ್ರೀಧರ್ಮಶಾಸ್ತ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಆಲ್ಫಾ’ ಚಿತ್ರದ ಚಿತ್ರೀಕರಣ ಮುಗಿದಿದೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ಹಾಸನ, ಸಕಲೇಶಪುರ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಚಿತ್ರದ ಮೊದಲ ಪ್ರತಿ ಸಿದ್ಧವಾಗಲಿದೆ. ಸೆಪ್ಟೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ.

ಚಿರಂತ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮೂಲತಃ ಬಾಕ್ಸರ್ ಆಗಿರುವ ಚಿರಂತ ಅವರಿಗೆ ‘ಆಲ್ಫಾ’ ಚೊಚ್ಚಲ ಚಿತ್ರ. ನಾಯಕನಾಗಿ ಕಾಣಿಸಿಕೊಂಡಿರುವ ಚಿರಂತ ಈ ಚಿತ್ರದ ನಿರ್ದೇಶಕರೂ ಹೌದು. ಕಥೆ, ಚಿತ್ರಕಥೆ ಕೂಡ ಚಿರಂತ ಅವರದೇ. ಸಿಂಧೂಜ ಈ ಚಿತ್ರದ ನಾಯಕಿ. ಜಗದೀಶ್ ಹಾಗೂ ರವಿಚಂದ್ರ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

‘ಆಲ್ಫಾ’ ಎಂದರೆ ಗ್ರೀಕ್ ಭಾಷೆಯಲ್ಲಿ ನಂಬರ್ ಒನ್ ಎಂದು ನಾಯಕ ಹಾಗೂ ನಿರ್ದೇಶಕ ಚಿರಂತ ಶೀರ್ಷಿಕೆಯ ಅರ್ಥ ತಿಳಿಸಿದ್ದಾರೆ.

ಅಜ್ಮಲ್ ಖಾನ್ ಛಾಯಾಗ್ರಹಣ, ವಿನ್ಸನ್ ಅಭಿಷೇಕ್ ಸಂಗೀತ ನಿರ್ದೇಶನ, ಸುಜೇಂದ್ರ ಎನ್ ಮೂರ್ತಿ ಸಂಕಲನ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.