ಬಾಲಿವುಡ್ ಬಿಗ್‌ಬಿ ಅಮಿತಾಬ್ ಬರ್ತ್‌ ಡೇ...ಶುಭ ಹಾರೈಸಿದ ಮೋದಿ

6

ಬಾಲಿವುಡ್ ಬಿಗ್‌ಬಿ ಅಮಿತಾಬ್ ಬರ್ತ್‌ ಡೇ...ಶುಭ ಹಾರೈಸಿದ ಮೋದಿ

Published:
Updated:

ನಟನೆ ಹುಟ್ಟಿನಿಂದ ಬಂದುದ್ದಲ್ಲ. ಶಿಸ್ತು, ಸಂಯಮ, ಸಹನೆ...ಇವೆಲ್ಲವೂ ಒರೆಗೆ ಹಚ್ಚುತ್ತಾ ಹೋದಾಗಲೇ ನಟನೆ ಎಂಬ ಹಣ್ಣು ಮಾಗಲು ಸಾಧ್ಯ ಎಂದು ತೋರಿಸಿಕೊಟ್ಟವರು ಬಾಲಿವುಡ್ ಬಿಗ್ ಬಿ....

ಸತತ ಐದು ದಶಕಗಳಿಂದಲೂ ಬಾಲಿವುಡ್ ಎಂಬ ಮಹಾಸಾಗರದಲ್ಲಿ ಈಜುತ್ತಿರುವ ಬಾಲಿವುಡ್ ಬಾದ್‌ಷಾ ಎಂದೇ ಖ್ಯಾತರಾಗಿರುವ ಅಮಿತಾಬ್ ಬಚ್ಚನ್ 76ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

ಪ್ರತಿ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡುವ ಅಮಿತಾಬ್ ಅವರ ನಟನೆ ಆನಂದ್, ಜಾಜಿರ್, ಬಾಲಿಕಾ ವಧು, ಲಗಾನ್, ಜೋಧಾ ಅಕ್ಬರ್ , ಡಾನ್ , ಶೋಲೆ, ಆ್ಯಂಗ್ರಿ ಯಂಗ್ ಮ್ಯಾನ್, ಪಾ, ಪೀಕು ಹೀಗೆ ಒಂದಲ್ಲಾ ಒಂದು ವಿಭಿನ್ನ ಸಿನಿಮಾಗಳ ಮೂಲಕ ತೆರೆದುಕೊಳ್ಳುತ್ತಾ ಪ್ರೇಕ್ಷಕರ ಮನಗೆದ್ದಿತು. 

ಬಾಲಿವುಡ್‌ನ ಬಿಗ್‌ಬಿ ಇದುವರೆಗೆ 190 ಸಿನಿಮಾಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಮೆರೆದಿದ್ದಾರೆ. ಇದುವರೆಗೆ 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 15 ಫಿಲ್ಮ್‌ಫೇರ್ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ...ಹೀಗೆ ಲೆಕ್ಕಕ್ಕೆ ಸಿಗದಷ್ಟು ಪ್ರಶಸ್ತಿಗಳು ಇವರ ಅಭಿನಯ ಬದುಕಿನ ಜೋಳಿಗೆಯಲ್ಲಿ ತುಂಬಿವೆ. 

ಇದರೊಟ್ಟಿಗೆ ಪ್ರತಿಷ್ಠಿತ ಪ್ರಶಸ್ತಿಗಳಾದ ಪದ್ಮಶ್ರೀ(1984), ಪದ್ಮಭೂಷಣ(2001), ಪದ್ಮವಿಭೂಷಣ (2015)ಪ್ರಶಸ್ತಿಗಳು ಇವರ ನಟನೆಗೆ ಸಂದ ಗೌರವ.  ಇನ್ನು ಕೌನ್‌ಬನೇಗಾ ಕರೋಡ್ ಪತಿ ಎಂಬ ಟಿವಿ ಶೋ ಮೂಲಕವೂ ಎಲ್ಲರ ಮನೆ ತಲುಪಿದವರು. 

ಇಳಿವಯಸ್ಸಿಗೆ ಸೆಡ್ಡು ಹೊಡೆದು ಬದುಕುತ್ತಿರುವ ಅಮಿತಾಬ್, ಅಮಿರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೋಸ್ತಾನ್ ಸಿನಿಮಾದಲ್ಲಿ ಉತ್ಸಾಹವೇ ಬೆಚ್ಚುವಂತೆ ಅಭಿನಯಿಸಿರುವುದು ಇವರ ಕಲಾ ನೈಪುಣ್ಯಕ್ಕೆ ಹಿಡಿದ ಕನ್ನಡಿ. 

ಪ್ರಪಂಚದಾದ್ಯಂತ ಖ್ಯಾತಿ ಗಳಿಸಿರುವ ಇವರಲ್ಲಿ ಒಬ್ಬ ಗಾಯಕನಿದ್ದಾನೆ. ಒಬ್ಬ ಮುದ್ದಾದ ಯುವಕನಿದ್ದಾನೆ. ಗಾಂಭೀರ್ಯದ ಅಪ್ಪನಿದ್ದಾನೆ. ನೋವು ಎಂದಾಗ ಅಪ್ಪಿ ಹಿಡಿದು ಮುದ್ದಾಡುವ ಅಮ್ಮನಿದ್ದಾಳೆ, ಸಮಾಜಮುಖಿ ಚಿಂತಕನಿದ್ದಾನೆ.....ಹೌದು ಇವೆಲ್ಲವೂ ಬಿಗ್‌ಬಿ...

ಒಟ್ಟಿನಲ್ಲಿ ಅಮಿತಾಬ್ ಸಿನಿಮಾ ಕ್ಷೇತ್ರದಲ್ಲಿ ಶಿಲೆಯಾಗಿ ಪ್ರವೇಶಿಸಿ ಒಂದು ಸುಂದರ ಶಿಲ್ಪವಾಗಿ ಎದ್ದು ನಿಂತ ಅಭಿನಯ ಪ್ರವೀಣ ಎಂದರೆ ತಪ್ಪಾಗಲಾರದು. 

ಅಮಿತಾಬ್ ಅವರ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಹಾರೈಸಿದ್ದು, ಭಾರತದ ಹೆಮ್ಮೆಯ ಅಮಿತಾಬ್ ಅವರಿಗೆ ಆಯಷ್ಯ ಆರೋಗ್ಯ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ

ಇನ್ನು ಕ್ರಿಕೆಟಿಗರು, ಬಾಲಿವುಡ್ ನಟ–ನಟಿಯರು, ತಮಿಳು ನಟ ರಜನಿಕಾಂತ್ ಹೀಗೆ ಹಲವು ಗಣ್ಯರಿಂದ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ.

ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಅಮಿತಾಬ್ ಸಿನಿಮಾಯಾನದ ಬಗ್ಗೆ ಮರಳಿನಿಂದ ಕಲಾಕೃತಿ ರಚಿಸಿ ಶುಭಕೋರಿದ್ದಾರೆ

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !