ಮುಂಬೈ: ಹೈದರಾಬಾದ್‌ನಲ್ಲಿ ‘ಪ್ರಾಜೆಕ್ಟ್ ಕೆ’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ತಮ್ಮ ಪಕ್ಕೆಲುಬು ಮುರಿದಿರುವುದಾಗಿ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ತಿಳಿಸಿದ್ದಾರೆ.

ತಮ್ಮ ವೈಯಕ್ತಿಕ ಬ್ಲಾಗ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಅವರು, ‘ಆ್ಯಕ್ಷನ್ ದೃಶ್ಯ ಚಿತ್ರೀಕರಣ ಸಂದರ್ಭದಲ್ಲಿ ಗಾಯಗೊಂಡಿದ್ದೆ. ಪಕ್ಕೆಲುಬು ಮುರಿದಿತ್ತು. ಕೂಡಲೇ ಚಿತ್ರೀಕರಣ ನಿಲ್ಲಿಸಿ ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಸಿ.ಟಿ ಸ್ಕ್ಯಾನ್ ನಡೆಸಿದ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಹೀಗಾಗಿ ಅಲ್ಲಿಂದ ಮುಂಬೈ ನಿವಾಸಕ್ಕೆ ಹಿಂದಿರುಗಿ ವಿಶ್ರಾಂತಿ
ಪಡೆಯುತ್ತಿದ್ದೇನೆ ’ಎಂದು ತಿಳಿಸಿದ್ದಾರೆ.

‘ನಡೆದಾಡುವಾಗ ಮತ್ತು ಉಸಿರಾಡುವಾಗ ಕಷ್ಟವಾಗುತ್ತಿದೆ. ಚೇತರಿಕೆಗೆ ಕೆಲವು ವಾರಗಳು ಬೇಕಾಗಬಹುದು. ಅಲ್ಲಿಯವರೆಗೆ ಬಾಕಿ ಇದ್ದ
ಕೆಲಸಗಳನ್ನು ರದ್ದು ಮಾಡಲಾಗಿದೆ, ಕೆಲವನ್ನು ಮುಂದೂಡಲಾಗಿದೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.