ಸೋಮವಾರ, ಜೂಲೈ 6, 2020
23 °C

ಕೌನ್‌ ಬನೇಗಾ ಕರೋಡ್‌ಪತಿ: ಅಮಿತಾಭ್‌ಗೆ ವಿಶೇಷ ಉಡುಗೊರೆ ಕೊಟ್ಟ ಸುಧಾಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಕೌನ್‌ ಬನೇಗಾ ಕರೋಡ್‌ಪತಿ(ಕೆಬಿಸಿ)ಯಲ್ಲಿ ಭಾಗವಹಿಸಿದ್ದ ಲೇಖಕಿ ಹಾಗೂ ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಈ ಕಾರ್ಯಕ್ರಮ ನಡೆಸಿಕೊಡುವ ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಅವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. 

ಕೆಬಿಸಿಯ 11ನೇ ಅವೃತ್ತಿಯಲ್ಲಿ ಭಾಗವಹಿಸಿದ್ದ ಸುಧಾಮೂರ್ತಿ ದೇವದಾಸಿಯರು ತಯಾರಿಸಿದ್ದ ವಿಶೇಷ ಕೌದಿಯನ್ನು ಅಮಿತಾಬ್‌ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಷಯವನ್ನು ಅಮಿತಾಭ್‌ ಅವರೇ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ನಾನು ಸಿನಿಮಾಗಳನ್ನು ನೋಡುತ್ತೇನೆ, ನಟರಾದ ಅಮಿತಾಭ್‌ ಬಚ್ಚನ್ ಅವರನ್ನು ಭೇಟಿಯಾಗಿದ್ದು ನನಗೆ ಸಂತೋಷವಾಗಿದೆ. ಈ ಕಾರ್ಯಕ್ರಮದಲ್ಲಿ ಸೋಲುವುದು, ಗೆಲ್ಲುವುದು ಮುಖ್ಯವಲ್ಲ, ನಮ್ಮ ಕೆಲಸಗಳ ಮೂಲಕ ಜನರನ್ನು ಮುಟ್ಟುವುದೇ ನಮ್ಮ ಉದ್ದೇಶವಾಗಿರಬೇಕು ಎಂದು ಅವರು ಹೇಳಿದ್ದಾರೆ. 

ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಸುಧಾಮೂರ್ತಿ ಅವರು ದೇವದಾಸಿಯರಿಗೆ ಹೊಸ ಬದುಕು ಕೊಟ್ಟಿದ್ದಾರೆ. ದೇವದಾಸಿಯರು ತಯಾರಿಸಿರುವ ಈ ಕೌದಿ ಸದಾ ನೆನಪಿನಲ್ಲಿ ಉಳಿಯುವ ಕಾಣಿಕೆಯಾಗಿದೆ ಎಂದು ಅಮಿತಾಭ್‌ ಬರೆದುಕೊಂಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು