ನವದೆಹಲಿ: ತಮ್ಮ ಮಗ, ನಟ ಅಭಿಷೇಕ್ ಬಚ್ಚನ್ ಅವರು ‘ಅನಗತ್ಯವಾಗಿ ಸ್ವಜನಪಕ್ಷಪಾತದ ನಕಾರಾತ್ಮಕತೆಯ ಬಲಿಪಶುವಾಗಿದ್ದಾರೆ’ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಬೆಂಬಲಿಸಿದ್ದಾರೆ.

ಈ ಮೂಲಕ ತಮ್ಮ ಮಗ, ಆತನ ಚಿತ್ರಗಳ ಕುರಿತಂತೆ ಬಾಲಿವುಡ್ನಲ್ಲಿ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಕಿಡಿಕಾರಿದ್ದಾರೆ.

ಬಾಲಿವುಡ್ ಸುದ್ದಿ ಪೋರ್ಟಲ್ವೊಂದು ಪ್ರಚಾರ ಕಾರ್ಯಕ್ರಮವೊಂದರಲ್ಲಿ ಅಭಿಷೇಕ್ ಫೋಟೊಗಳಿಗೆ ಪೋಸ್ ನೀಡುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದೆ. ಅದಕ್ಕೆ ‘ಅಭಿಷೇಕ್ ಬಚ್ಚನ್ ಅನಗತ್ಯವಾಗಿ 'ಸ್ವಜನಪಕ್ಷಪಾತದ ನಕಾರಾತ್ಮಕತೆಗೆ ಬಲಿಯಾಗಿದ್ದಾರೆ. ಆದರೆ, ಅವರ ಚಿತ್ರಗಳಲ್ಲಿ ಹಲವು ಉತ್ತಮ ಚಿತ್ರಗಳಿವೆ’ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಿದೆ.

ವಿಡಿಯೊ ಕ್ಲಿಪ್ ಇರುವ ಈ ಪೋಸ್ಟ್ ಅನ್ನು ಅಮಿತಾಬ್ ಬಚ್ಚನ್ ತಮ್ಮ ಎಕ್ಸ್ ಖಾತೆಯಲ್ಲಿ ಮರುಹಂಚಿಕೊಂಡಿದ್ದಾರೆ. ‘ನಾನು ಅಭಿಷೇಕ್ ತಂದೆಯಾಗಿರುವುದರಿಂದ ಮಾತ್ರ ಈ ಪೋಸ್ಟ್ ಬೆಂಬಲಿಸುತ್ತಿಲ್ಲ. ನನಗೂ ಅದೇ ಭಾವನೆ ಇದೆ’ಎಂದು ಹೇಳಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಆಗಾಗ್ಗೆ ತಮ್ಮ ಮಗನ ಚಿತ್ರಗಳ ಬಗ್ಗೆ ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ. ‘ಬಂಟಿ ಔರ್ ಬಬ್ಲಿ’, ‘ಸರ್ಕಾರ್’ ಮತ್ತು ‘ಪಾ’ ನಂತಹ ಚಿತ್ರಗಳಲ್ಲಿ ಸಹನಟರಾಗಿದ್ದಾರೆ.

ಅಭಿಷೇಕ್ ಬಚ್ಚನ್ ತಮ್ಮ ಮುಂದಿನ ಚಿತ್ರ, ಪ್ರೈಮ್ ವಿಡಿಯೊದಲ್ಲಿ ಪ್ರಸಾರವಾಗುವ ‘ಬಿ ಹ್ಯಾಪಿ’ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.