‘ಸಾಹೊ’ ಪೋಸ್ಟರ್ ಹಂಚಿಕೊಂಡ ಸ್ವೀಟಿ!

ಗುರುವಾರ , ಜೂನ್ 27, 2019
29 °C
Saaho

‘ಸಾಹೊ’ ಪೋಸ್ಟರ್ ಹಂಚಿಕೊಂಡ ಸ್ವೀಟಿ!

Published:
Updated:
Prajavani

‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಸಾಹೊ’ದ ಮೊದಲ ನೋಟ (ಫಸ್ಟ್‌ ಲುಕ್) ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನಾದಿನ ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳಿಗೆ ಕುತೂಹಲದ ವಿಷಯವೊಂದನ್ನು ಹೇಳುವುವುದಾಗಿ ಹೇಳಿಕೊಂಡಿದ್ದರು. ಅದಕ್ಕೆ ತಕ್ಕಂತೆ ಮರುದಿನವೇ ಪ್ರಭಾಸ್, ‘ಸಾಹೊ’ ಪೋಸ್ಟರ್‌ನೊಂದಿಗೆ ಅಭಿಮಾನಿಗಳ ಕುತೂಹಲ ತಣಿಸಿದ್ದಾರೆ.

‘ಸಾಹೊ’ದಲ್ಲಿ ಪ್ರಭಾಸ್ ಜತೆಗೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಾಯಕಿಯಾಗಿದ್ದಾರೆ. ನೀಲ್ ನಿತಿನ್ ಮುಕೇಶ್, ಎವೆಲಿನ್ ಶರ್ಮಾ, ಮಂದಿರಾ ಬೇಡಿ, ಜಾಕಿ ಶ್ರಾಫ್ ಇತರ ತಾರಾಬಳಗದಲ್ಲಿದ್ದಾರೆ. ‘ಸಾಹೊ’ಪೋಸ್ಟರ್ ಹಂಚಿಕೊಂಡು ‘ಡಾರ್ಲಿಂಗ್ಸ್ ನೋಡಿ ನಿಮಗಾಗಿ ಇಲ್ಲಿದೆ ‘ಸಾಹೊ’ ಪೋಸ್ಟರ್. ಆಗಸ್ಟ್ 15ರಂದು ನಿಮ್ಮನ್ನು ಸಿನಿಮಾ ಮಂದಿರಗಳಲ್ಲಿ ಭೇಟಿಯಾಗೋಣ’ ಎಂದು ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ಸಾಹೊ’ ಪೋಸ್ಟರ್ ಅನ್ನು ಪ್ರಭಾಸ್ ಗೆಳತಿ ಸ್ವೀಟಿ ಅರ್ಥಾತ್ ಅನುಷ್ಕಾ ಶೆಟ್ಟಿ ಹಂಚಿಕೊಂಡಿರುವುದು ಇಬ್ಬರ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿರುವುದು ಸುಳ್ಳಲ್ಲ. ಪೋಸ್ಟರ್ ಶೇರ್ ಮಾಡಿಕೊಂಡಿರುವ ಸ್ವೀಟಿ, ‘ಆಲ್ ದಿ ಬೆಸ್ಟ್ ಪ್ರಭಾಸ್’ ಎಂದು ಶುಭ ಹಾರೈಸಿದ್ದಾರೆ. 

ಸ್ವೀಟಿ ಮತ್ತು ಪ್ರಭಾಸ್ ಪರಸ್ಪರ ಪ್ರೀತಿಸುತ್ತಿದ್ದಾರೆ ಅನ್ನುವ ಗಾಳಿಸುದ್ದಿಗಳಿಗೇನೂ ಟಾಲಿವುಡ್‌ನಲ್ಲಿ ಕೊರತೆಯಿಲ್ಲ. ಆದರೆ, ಇಬ್ಬರೂ ತಮ್ಮ ಪ್ರೇಮದ ಕುರಿತು ಇದುವರೆಗೂ ಮಾತನಾಡಿಲ್ಲ. ತೆರೆಯ ಮೇಲೆ ಒಳ್ಳೆಯ ಜೋಡಿ ಎನಿಸಿಕೊಂಡಿರುವ ಇವರಿಬ್ಬರೂ ನಿಜ ಜೀವನದಲ್ಲೂ ಜೋಡಿಯಾಗಬೇಕೆಂಬುದೇ ಅಭಿಮಾನಿಗಳ ಬಯಕೆ. 

 ‘ಸಾಹೊ’ದಲ್ಲಿ ಪ್ರಭಾಸ್ ವಿಭಿನ್ನ ಬಗೆಯ ಸ್ಟಂಟ್‌ಗಳನ್ನು ಮಾಡಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಲಿವುಡ್ ಸ್ಟಂಟ್ ನಿರ್ದೇಶಕ ಕೆನ್ನೆ ಬೇಟ್ಸ್‌ ಪ್ರಭಾಸ್‌ಗೆ ಸ್ಟಂಟ್ ತರಬೇತಿ ನೀಡಿದ್ದಾರೆ. ಈ ಸಿನಿಮಾವನ್ನು ಹಿಂದಿಯಲ್ಲಿ ಡಬ್ ಮಾಡಲು ಪ್ರಭಾಸ್ ಹಿಂದಿ ಭಾಷೆಯನ್ನೂ ಕಲಿತಿದ್ದಾರೆ. ‘ಸಾಹೊ’ ಆಗಸ್ಟ್ 15ರಂದು ಏಕಕಾಲಕ್ಕೆ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆ ಕಾಣಲಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !