ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲತಡಿ ಹುಡುಗನ ಉಡದ ಪಟ್ಟು

Last Updated 19 ಜುಲೈ 2018, 19:30 IST
ಅಕ್ಷರ ಗಾತ್ರ

‘ಉಡದ ಪಟ್ಟು’ ಎಂಬುದು ಕನ್ನಡದ ನಾಣ್ಣುಡಿ. ಉಡ ಮರ ಅಥವಾ ಗೋಡೆಯನ್ನು ಗಟ್ಟಿಯಾಗಿ ಹಿಡಿದುಕೊಂಡರೆ ಅದನ್ನು ಬಿಡಿಸಿಕೊಳ್ಳುವುದು ಕಷ್ಟ. ‘ಹಿಂದೆ ರಾಜಮಹಾರಾಜರು ಶತ್ರುಗಳ ಕೋಟೆ ಮೇಲೆ ದಾಳಿ ಮಾಡಲು ಈ ಪ್ರಾಣಿಯನ್ನು ಬಳಸುತ್ತಿದ್ದರು. ‘ಉಡುಂಬಾ’ ಚಿತ್ರದ ನಾಯಕ ಕೂಡ ಉಡದಂತೆ ಹಟ ಹಿಡಿಯುವ ಹುಂಬ. ಅದಕ್ಕಾಗಿಯೇ ಚಿತ್ರಕ್ಕೆ ಈ ಹೆಸರು ಇಡಲಾಗಿದೆ’ ಎಂದರು ನಿರ್ದೇಶಕ ಶಿವರಾಜ್.

ಚಿತ್ರ ಬಿಡುಗಡೆಯ ಹಂತದಲ್ಲಿದ್ದು, ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

ಶಿವರಾಜ್‌ಗೆ ಇದು ಮೊದಲ ಚಿತ್ರ. ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಅವರಿಗಿದೆ. ‘ಕಡಲತಡಿಯ ಹುಡುಗನ ಕಥೆ ಇದು. ಮೀನು ಮಾರಿಕೊಂಡು ಬದುಕು ಸಾಗಿಸುತ್ತಿರುತ್ತಾನೆ. ಆತ ಒಂದು ಸಾಧನೆಗೆ ಇಳಿಯುತ್ತಾನೆ. ಅದರ ಸುತ್ತವೇ ಕಥೆ ಹೊಸೆಯಲಾಗಿದೆ’ ಎಂದರು.

ಪವನ್‌ ಶೌರ್ಯ ಈ ಚಿತ್ರದ ನಾಯಕ ನಟ. ‘ನನ್ನ ಪಾತ್ರದಲ್ಲಿ ಭಾವುಕತೆ ಮಿಳಿತಗೊಂಡಿದೆ. ಪಾತ್ರಕ್ಕೆ ಜೀವ ತುಂಬಿದ ತೃಪ್ತಿಯಿದೆ. ನಿರ್ದೇಶಕರು ಮತ್ತು ನಿರ್ಮಾಪಕರ ಸಹಾಯವನ್ನು ಮರೆಯಲಾರೆ’ ಎಂದರು.

ನಾಯಕಿ ಚಿರಶ್ರೀ ಚಿಂತನ್, ‘ಚಿತ್ರದಲ್ಲಿ ನನ್ನ ಹೆಸರು ಗೀತಾ. ನರ್ಸಿಂಗ್‌ ಹುಡುಗಿ ಪಾತ್ರ ಮಾಡಿದ್ದೇನೆ. ನಗರದಿಂದ ಹಳ್ಳಿಗೆ ಬರುತ್ತೇನೆ. ಆಗ ನಾಯಕನೊಂದಿಗೆ ಪ್ರೀತಿ ಬೆಳೆಯುತ್ತದೆ’ ಎಂದಷ್ಟೇ ಹೇಳಿ ಮಾತು ಮುಗಿಸಿದರು.

ಚಿತ್ರಕ್ಕೆ ಬಂಡವಾಳ ಹೂಡಿರುವವರಲ್ಲಿ ಒಬ್ಬರಾಗಿರುವ ಮಾನಸ ಮಹೇಶ್‌ ಖಳನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಆಂಧ್ರ ಮೂಲದ ಹನುಮಂತರಾವ್‌ ಮತ್ತು ವೆಂಕಟ್‌ ರೆಡ್ಡಿ ಆರ್ಥಿಕ ಚಿತ್ರಕ್ಕೆ ಇಂಧನ ಒದಗಿಸಿದ್ದಾರೆ. ಚಿತ್ರದ ಐದು ಹಾಡುಗಳಿಗೆ ವಿನೀತ್‌ರಾಜ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಎಸ್‌. ಹಾಲೇಶ್‌ ಅವರದ್ದು. ಇದೇ ವೇಳೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.


-ಪವನ್‌ ಶೌರ್ಯ

*


-ಶಿವರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT