ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಾ ಅವತಾರ್2 ಸಿನಿಮಾ ಬಜೆಟ್‌ ಇಷ್ಟೊಂದಾ! ಇದುವರೆಗಿನ ಎಲ್ಲ ದಾಖಲೆಗಳು ಧೂಳಿಪಟ

Last Updated 13 ಡಿಸೆಂಬರ್ 2022, 13:09 IST
ಅಕ್ಷರ ಗಾತ್ರ

ಬೆಂಗಳೂರು:ಹಾಲಿವುಡ್ ನಿರ್ದೇಶಕಜೇಮ್ಸ್ ಕೆಮರೂನ್ ಅವರ 'ಅವತಾರ್' ಸಿನಿಮಾದಮುಂದುವರೆದ ಭಾಗವಾದ 'ಅವತಾರ್ ದಿ ವೇ ಆಫ್ ವಾಟರ್' ಹೊಸಸಿನಿಮಾ ಡಿಸೆಂಬರ್ 16 ರಂದು ಶುಕ್ರವಾರ ಜಾಗತಿಕವಾಗಿಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ.

ಪಂಡೋರಾ ಎಂಬ ಕಾಲ್ಪನಿಕಗ್ರಹದಲ್ಲಿ ಕೆಮರೂನ್ ಮತ್ತೇನು ಮ್ಯಾಜಿಕ್ ತೋರಿಸಲಿದ್ದಾರೆ ಎಂದು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಅಷ್ಟಕ್ಕೂ ಈ ಚಿತ್ರದ ಬಜೆಟ್ ಎಷ್ಟು? ಎಂದು ಹಲವರು ಚಕಿತರಾಗಿದ್ದಾರೆ.

ಮನಿ ಕಂಟ್ರೋಲ್.ಕಾಮ್ ವರದಿ ಮಾಡಿರುವ ಪ್ರಕಾರ ಹಾಗೂ ಇತ್ತೀಚಿನ ಕೆಲ ವರದಿಗಳ ಪ್ರಕಾರ ಅವತಾರ್ 2 ಸಿನಿಮಾ ನಿರ್ಮಾಣ ಮಾಡಲು ₹3,351 ಕೋಟಿ (ಸುಮಾರು 400 ಮಿಲಿಯನ್ ಡಾಲರ್) ಖರ್ಚಾಗಿದೆ ಎನ್ನಲಾಗಿದೆ. ಈ ಮೊದಲು ₹2,555 ಕೋಟಿ ಎಂದು ಹೇಳಲಾಗಿತ್ತು. ಇದುವರೆಗಿನ ಅತಿಹೆಚ್ಚಿನ ಬಜೆಟ್ ಚಿತ್ರವಾಗಿರುವ ಅವತಾರ್ ಸಿನಿಮಾ ₹2200 ಕೋಟಿಯಲ್ಲಿ ನಿರ್ಮಾಣವಾಗಿತ್ತು.

ಇನ್ನು 3 ಗಂಟೆ 11 ನಿಮಿಷ ಇರುವಈ ಚಿತ್ರ ಭಾರತದಲ್ಲಿ ಸುಮಾರು 3,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. 4ಡಿಎಕ್ಸ್ಆರ್3ಡಿ ಶೋಗಳಒಂದು ಟಿಕೆಟ್ ದರ ಮಲ್ಟಿಪೆಕ್ಸ್‌ಗಳಲ್ಲಿ ₹2,500ರವರೆಗೆ ಇದೆ. 3ಡಿ ಶೋಗಳ ದರ ಕೂಡ ₹1500ರವರಗೆ ಇವೆ.‘20th ಸೆಂಚುರಿ ಸ್ಟುಡಿಯೋಸ್‌ ಇಂಡಿಯಾ’ ಕಂಪನಿ ಭಾರತದಲ್ಲಿ ಈ ಚಿತ್ರವನ್ನು ಹಂಚಿಕೆ ಮಾಡುತ್ತಿದೆ.

ಇಷ್ಟು ದೊಡ್ಡಮೊತ್ತದ ಬಂಡವಾಳ ಹಾಕಿರುವ ನಿರ್ಮಾಪಕರು ಚಿತ್ರಕ್ಕೆ ಹೇಗೆ ಪ್ರತಿಕ್ರಿಯೆ ಸಿಗುತ್ತದೆ ಎಂದು ಎದುರು ನೋಡುತ್ತಿದ್ದಾರೆ. ನಿರ್ದೇಶಕ ಕೆಮರೂನ್ ಕೂಡ ಈ ಚಿತ್ರಕ್ಕೆ ಸಹನಿರ್ಮಾಪಕರಾಗಿದ್ದಾರೆ.

ನಟರಾದ ವರ್ಥಿಂಗ್‌ಟನ್, ಜೋ ಸಲ್ಡಾನಾ, ಸ್ಟೀಪನ್ ಲಾಂಗ್, ಮಿಚಲ್ ರೋಡ್ರಿಗಜ್, ಸಿಗೋರನಿ ವೇವರ್, ಕೇಟ್ ವಿನ್ಸ್‌ಲೆಟ್ ಸೇರಿದಂತೆ ಹಲವರು ಮುಖ್ಯ ತಾರಾಗಣದಲ್ಲಿದ್ದಾರೆ.

ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ ಅವತಾರ್ 2

'ಅವತಾರ್ ದಿ ವೇ ಆಫ್ ವಾಟರ್' ಹೊಸಸಿನಿಮಾಕನ್ನಡದಲ್ಲೂಬಿಡುಗಡೆಯಾಗುತ್ತಿದೆ.

ಕನ್ನಡಿಗರ ಒತ್ತಾಯಕ್ಕೆ ಮಣಿದಿರುವ ಚಿತ್ರದ ಭಾರತದಲ್ಲಿನ ಹಂಚಿಕೆದಾರರಾದ ‘20th ಸೆಂಚುರಿ ಸ್ಟುಡಿಯೋಸ್‌ ಇಂಡಿಯಾ’ ಕಂಪನಿ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT