ಶುಕ್ರವಾರ, ನವೆಂಬರ್ 15, 2019
22 °C

ಬಿಲ್‌ಗೇಟ್ಸ್‌ ಸಿನಿಮಾ ಆಡಿಯೊ ಬಿಡುಗಡೆ

Published:
Updated:

ಮೈಕ್ರೋಸಾಫ್ಟ್ ಸಂಸ್ಥಾಪಕ ‘ಬಿಲ್‍ಗೇಟ್ಸ್’ ಹೆಸರು ಜಗತ್‌ಪ್ರಸಿದ್ಧ. ಈಗ ಅದೇ ಹೆಸರಿನ ಕನ್ನಡಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಧ್ವನಿ ಸುರುಳಿಯನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಶಿಶಿರ್‌ ಶಾಸ್ತ್ರಿ ಮತ್ತು ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿರುವ ‘ಬಿಲ್‌ಗೇಟ್ಸ್‌’ ಚಿತ್ರದಲ್ಲಿ ಅಕ್ಷರಾರೆಡ್ಡಿ ಮತ್ತು ರಶ್ಮಿತಾ ರೋಜ ಇಬ್ಬರು ನಾಯಕಿಯರು ಇದ್ದಾರೆ. ಈ ಚಿತ್ರಕ್ಕೆ ಕಥೆ ಬರೆಯುವ ಜತೆಗೆ ನಿರ್ದೇಶನ ಮಾಡಿರುವ ಶ್ರೀನಿವಾಸ್‌ ಸಿ. ಮಂಡ್ಯ, ಇದೊಂದು ಮನರಂಜನಾತ್ಮಕ ಸಿನಿಮಾ. ಕಾಮಿಡಿ, ಸಸ್ಪೆನ್ಸ್‌ ಕೂಡ ಇದೆ. ಒಂದಷ್ಟು ದೃಶ್ಯಗಳು ಚೆನ್ನಾಗಿ ಮೂಡಿಬರದ ಕಾರಣ ಮರು ಚಿತ್ರೀಕರಣ ನಡೆಸಲಾಗಿದೆ. ಯಮಲೋಕದ ಸನ್ನಿವೇಶಗಳು ಸಾಕಷ್ಟು ಇದ್ದು, ಗ್ರಾಫಿಕ್ಸ್ ಮೂಲಕ ಯಮಲೋಕದ ದೃಶ್ಯ ರೂಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಹಳ್ಳಿಯಲ್ಲಿ ಪಾಂಡು-ಗಿರಿ ಎಂಬ ಇಬ್ಬರು ಆತ್ಮೀಯ ಸ್ನೇಹಿತರು ಇರುತ್ತಾರೆ. ಒಮ್ಮೆ ತರಲೆ, ತುಂಟಾಟ ಮಾಡುವಾಗ ಸಿಕ್ಕಿಬಿದ್ದು ಶಿಕ್ಷಕರಿಂದ ಬುದ್ಧಿಮಾತು ಹೇಳಿಸಿಕೊಳ್ಳುತ್ತಾರೆ. ಬಿಲ್‌ಗೇಟ್ಸ್‌ ಕಥೆ ಕೇಳಿ ಅವರಂತೆ ಆಗಲು ಬೆಂಗಳೂರಿಗೆ ಬಂದ ಇಬ್ಬರು ಹುಡುಗರು ಮುಂದೆ ಏನಾಗುತ್ತಾರೆ ಎನ್ನುವುದು ಚಿತ್ರದ ಹೂರಣ. ಹಾಸ್ಯ, ಕುತೂಹಲದೊಂದಿಗೆ ಕಥೆಯನ್ನು ನಿರೂಪಿಸಲಾಗಿದೆ ಎನ್ನುವ ಮಾತು ಸೇರಿಸಿದರು ನಿರ್ದೇಶಕರು.

ತಾರಾಗಣದಲ್ಲಿ ಕುರಿ ಪ್ರತಾಪ್‌, ಗಿರಿ, ರಾಜ್‌ ಶೇಖರ್‌, ರಾಜೇಶ್‌, ವಿ. ಮನೋಹರ್‌, ಬ್ಯಾಂಕ್‌ ಜನಾರ್ದನ್‌, ಯತಿರಾಜ್‌, ಪ್ರಿಯಾಂಕಾ ಚಿಂಚೊಳ್ಳಿ ಇದ್ದಾರೆ. ಪಾಂಚಜನ್ಯ ಸಿನಿ ಕ್ರಿಯೇಷನ್ಸ್‌ನಡಿ ನಿರ್ಮಿಸಿರುವ ಈ ಚಿತ್ರಕ್ಕೆ 12 ಮಂದಿ ಟೆಕಿಗಳು ಬಂಡವಾಳ ಹೂಡಿದ್ದಾರೆ. ರಾಕೇಶ್‌ ಸಿ. ತಿಲಕ್‌ ಅವರ ಛಾಯಾಗ್ರಹಣವಿದೆ. ನೋಬಿನ್‌ ಪೌಲ್‌ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಗಾಂಧಿನಗರದಲ್ಲಿ ಬಿಲ್‌ ಗೇಟ್ಸ್!

ಪ್ರತಿಕ್ರಿಯಿಸಿ (+)