ಬಿಂದಾಸ್‌ ಡಾನ್ಸರ್‌ ಕಥೆ

7

ಬಿಂದಾಸ್‌ ಡಾನ್ಸರ್‌ ಕಥೆ

Published:
Updated:
Deccan Herald

ಕಿರುತೆರೆಯಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳು ಹೆಚ್ಚಿವೆ. ಮಕ್ಕಳು, ವಯಸ್ಕರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತದೆ. ಬಹಳಷ್ಟು ಮಂದಿ ಇದರಲ್ಲಿ ಪಾಲ್ಗೊಳ್ಳಲು ಮುಂದಾದಾಗ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಅಂತಹ ಹುಡುಗನೊಬ್ಬನ ಸುತ್ತ ಹೆಣೆದಿರುವ ‘ಬಿಂದಾಸ್‌ ಗೂಗ್ಲಿ’ ಚಿತ್ರ ಈ ಶುಕ್ರವಾರ ತೆರೆ ಕಾಣುತ್ತಿದೆ.

ಡಾನ್ಸ್‌ ಕಾನೆಫ್ಟ್‌ ಆಧರಿಸಿದ ಚಿತ್ರ ಇದು. ಬೆಳಗಾವಿ ಮೂಲದ ಆಕಾಶ್‌ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ಕಲೆಗೂ ಹೆಚ್ಚಿನ ಪ್ರಾಧಾನ್ಯ ನೀಡಬೇಕು ಎನ್ನುವುದೇ ಚಿತ್ರದ ಆಶಯವಂತೆ. ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

‘ಹುಡುಗನೊಬ್ಬ ಡಾನ್ಸರ್‌ ಆಗಲು ಮುಂದಾಗುತ್ತಾನೆ. ಆಗ ಸಾಕಷ್ಟು ತೊಂದರೆ ಎದುರಿಸುತ್ತಾನೆ. ಗುರುಕುಲ ಎನ್ನುವ ಕಾಲೇಜಿನಲ್ಲಿ ನಡೆಯುವ ಕಥೆ ಇದು. ಆತ ಕೊನೆಗೆ ಹೇಗೆ ಅತ್ಯುತ್ತಮ ಡಾನ್ಸರ್‌ ಆಗಿ ಹೊರಹೊಮ್ಮುತ್ತಾನೆ ಎನ್ನುವುದೇ ಕಥಾಹಂದರ’ ಎಂದರು ನಿರ್ದೇಶಕ ಸಂತೋಷ್‌ ಕುಮಾರ್.

ನಟ ಧರ್ಮ ಕೀರ್ತಿರಾಜ್ ಅವರದು ಡಾನ್ಸ್‌ ತರಬೇತುದಾರನ ಪಾತ್ರ. ಕಥೆ ಸಾಗಲು ಅವರ ಪಾತ್ರ ನಿರ್ಣಾಯಕವಂತೆ. ‘ಇದೊಂದು ನೃತ್ಯ ವಿಷಯವಿಟ್ಟುಕೊಂಡು ಚಿತ್ರಿಸಿರುವ ಕಮರ್ಷಿಯಲ್ ಚಿತ್ರ. ಬಹುತೇಕ ಎಲ್ಲರೂ ಹೊಸಬರು. ಆದರೆ, ಅವರ ನಟನೆ ನೋಡಿದರೆ ಹಾಗೆ ಅನಿಸುವುದಿಲ್ಲ’ ಎಂದರು.

ಹಿರಿಯ ನಟ ರಾಮಕೃಷ್ಣ ಉಪ ಪ್ರಾಂಶುಪಾಲರಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಇಂತಹ ಸಿನಿಮಾದಲ್ಲಿ ನಟಿಸಿರುವುದು ಖುಷಿ ಕೊಟ್ಟಿದೆ. ನನ್ನ ಎಲ್ಲ ವರ್ತನೆಯನ್ನು ನಿರ್ದೇಶಕರು ಸಹಿಸಿಕೊಂಡಿದ್ದಾರೆ’ ಎಂದು ಧನ್ಯವಾದ ಹೇಳಿದರು.

ಚಿತ್ರದಲ್ಲಿ ಹನ್ನೊಂದು ಹಾಡುಗಳಿದ್ದು, ವಿನು ಮನಸು ಸಂಗೀತ ಸಂಯೋಜಿಸಿದ್ದಾರೆ. ಮ್ಯಾಥ್ಯುರಾಜನ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ವಿಜಯ್‌ ಕುಮಾರ್‌ ಅಣ್ವೇಕರ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಮತಾ ರಾವುತ್, ಶಿಲ್ಪಾ ಲಡ್ಡಿಮಠ್‌, ನಿಮಿಕಾ ರತ್ನಾಕರ್‌, ವಾಣಿಶ್ರೀ, ಕೀರ್ತಿರಾಜ್ ತಾರಾಗಣದಲ್ಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !