ಬಾಲಿವುಡ್ನ ಮಾದಕ ನಟಿ ಮತ್ತು ರೂಪದರ್ಶಿ ಪೂನಂ ಪಾಂಡೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎರಡೇ ವಾರದಲ್ಲಿ ಪತಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ.

‘ನನ್ನಪತಿ ಸ್ಯಾಮ್ ಬಾಂಬೆ ತನಗೆ ಕಿರುಕುಳ ನೀಡಿ, ಜೀವ ಬೆದರಿಕೆ ಹಾಕಿದ್ದಾನೆ’ ಎಂದು ಆರೋಪಿಸಿ ಈ ನಟಿ ಇತ್ತೀಚೆಗಷ್ಟೇ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಗೋವಾ ಪೊಲೀಸರು ಸ್ಯಾಮ್ ಬಾಂಬೆಯನ್ನು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಗೋವಾದ ಪ್ರಥಮದರ್ಜೆ ನ್ಯಾಯಾಲಯವು ₹ 20 ಸಾವಿರ ಭದ್ರತಾ ಠೇವಣಿ ಇರಿಸಿಕೊಂಡು ಸ್ಯಾಮ್ಗೆ ಷರತ್ತುಬದ್ಧ ಜಾಮೀನು ನೀಡಿತ್ತು.

‘ನಮ್ಮಿಬ್ಬರ ಸಂಬಂಧ ತುಂಬಾ ಹದಗೆಟ್ಟಿದೆ. ಪತಿ ನನ್ನನ್ನು ಯಾವಾಗಲೂ ನಿಂದಿಸುತ್ತಿದ್ದ ಮತ್ತು ಪ್ರಾಣಿಗಳಿಗೆ ಹೊಡೆದಂತೆ ಹೊಡೆಯುತ್ತಿದ್ದ.ನನ್ನನ್ನು ಉಸಿರುಗಟ್ಟಿಸಿ ಸಾಯಿಸಲು ಯತ್ನಿಸಿದ. ತಲೆಗೂದಲು ಹಿಡಿದು ಎಳೆದಿದ್ದಲ್ಲದೆ, ಮುಖಕ್ಕೆ ಗುದ್ದಿದ.ತಲೆಯನ್ನು ಹಿಡಿದು ಮಂಚದ ಮೂಲೆಗೆ ಚಚ್ಚಿದ. ಆತನ ಜೊತೆ ಸಂಸಾರ ನಡೆಸಲು ಸಾಧ್ಯವಿಲ್ಲ. ಪ್ರೀತಿ ಕುರುಡು ಎನ್ನುವುದಕ್ಕೆ ನನ್ನ ಬದುಕೇ ತಾಜಾ ನಿದರ್ಶನ’ ಎಂದು ಪೂನಂ ಮಾಧ್ಯಮಗಳ ಎದುರು ಅಳಲು ತೋಡಿಕೊಂಡಿದ್ದಾರೆ.

ಚಿತ್ರ ನಿರ್ಮಾಪಕ ಸ್ಯಾಮ್ ಹಾಗೂ ಪೂನಂ ಇದೇ ಸೆಪ್ಟೆಂಬರ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದಕ್ಕೂ ಮೊದಲು ಇವರಿಬ್ಬರು ಮೂರು ವರ್ಷಗಳ ಕಾಲ ಡೇಟಿಂಗ್ನಲ್ಲಿದ್ದರು. ಪೂನಂ ಸದ್ಯ ದಕ್ಷಿಣ ಗೋವಾದ ಕೊನಕೋನಾ ಪ್ರದೇಶದಲ್ಲಿ ನಡೆಯುತ್ತಿರುವ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ.ಹಿಂದಿ, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಪೂನಂ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.