ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್ ‘ಡೆವಿಲ್’ ಫಸ್ಟ್ ಲುಕ್ ಟೀಸರ್ ಬಿಡುಗಡೆ: ಮಿಲನ ಪ್ರಕಾಶ್ ಹೊಸ ಸಿನಿಮಾ

ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ Saregama Kannada ಯೂಟ್ಯೂಬ್ ಚಾನಲ್‌ನಲ್ಲಿ ಡೆವಿಲ್ ಟೀಸರ್ ಬಿಡುಗಡೆ
Published 16 ಫೆಬ್ರುವರಿ 2024, 13:21 IST
Last Updated 16 ಫೆಬ್ರುವರಿ 2024, 13:21 IST
ಅಕ್ಷರ ಗಾತ್ರ

ಬೆಂಗಳೂರು: ನಟ ದರ್ಶನ್ ಮುಖ್ಯಪಾತ್ರದಲ್ಲಿರುವ ‘ಡೆವಿಲ್’ ಎಂಬ ಹೊಸ ಸಿನಿಮಾಕ್ಕೆ ತಾರಕ್ ಖ್ಯಾತಿಯ ಮಿಲನ ಪ್ರಕಾಶ್ (ಪ್ರಕಾಶ್ ವೀರ್) ಆಕ್ಷನ್ ಕಟ್ ಹೇಳುತ್ತಿದ್ದು ಇದೀಗ ಈ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ.

ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ Saregama Kannada ಯೂಟ್ಯೂಬ್ ಚಾನಲ್‌ನಲ್ಲಿ ಡೆವಿಲ್ ಟೀಸರ್ ಬಿಡುಗಡೆಯಾಗಿದ್ದು ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.

ಇನ್ನೂ ವಿಶೇಷವೆಂದರೆ ಅಜನೀಶ್ ಲೋಕನಾಥ್ ಅವರ ಬಿಜಿಎಂನಲ್ಲಿ ಮೂಡಿಬಂದಿರುವ ಈ ಟೀಸರ್‌ನಲ್ಲಿ ದರ್ಶನ್ ಅವರ ಹೊಸ ಅವತಾರ ಕಂಡು ಅವರ ಅಭಿಮಾನಿಗಳು ಪುಳಕಿತರಾಗಿದ್ದಾರೆ.

2.7 ನಿಮಿಷದ ಈ ಟೀಸರ್ ಡೆವಿಲ್ ಚಿತ್ರದ ಕಥೆಯ ಬಗ್ಗೆ ತೀವ್ರ ಕುತೂಹಲ ಮೂಡುವಂತೆ ಮಾಡಿದೆ. ಡೆವಿಲ್ ಚಿತ್ರವನ್ನು ಮಿಲನ್ ಪ್ರಕಾಶ್ ಅವರ ಜೈಮಾತಾ ಕಂಬೈನ್ಸ್‌ ನಿರ್ಮಾಣ ಮಾಡುತ್ತಿದೆ.

ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT