ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡಾನ್, ‘ಸರ್ಫ್ ಎಕ್ಸೆಲ್ ಲಲಿತಾಜಿ’ ಖ್ಯಾತಿಯ ನಟಿ ಕವಿತಾ ಚೌಧರಿ ಇನ್ನಿಲ್ಲ

ಹೃದಯಾಘಾತದಿಂದ ಅಮೃತಸರದಲ್ಲಿ ನಿಧನ
Published 16 ಫೆಬ್ರುವರಿ 2024, 9:48 IST
Last Updated 16 ಫೆಬ್ರುವರಿ 2024, 9:48 IST
ಅಕ್ಷರ ಗಾತ್ರ

ನವದೆಹಲಿ: ದೂರದರ್ಶನದ 'ಉಡಾನ್' ಧಾರಾವಾಹಿ ಹಾಗೂ 1980 ರ ದಶಕದ ಸರ್ಫ್ ಡಿಟರ್ಜೆಂಟ್ ಪೌಡರ್ ಟಿ.ವಿ ಜಾಹೀರಾತು 'ಲಲಿತಾಜಿ' ಖ್ಯಾತಿಯ ನಟಿ ಕವಿತಾ ಚೌಧರಿ ಅವರು ನಿಧನರಾಗಿದ್ದಾರೆ.

ಅವರಿಗೆ 67 ವರ್ಷ ವಯಸ್ಸಾಗಿತ್ತು. ಇತ್ತೀಚಿಗೆ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಅಮೃತಸರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯಾಘಾತದಿಂದ ಗುರುವಾರ ನಿಧನರಾದರು ಎಂದು ಅವರ ಸಂಬಂಧಿಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಶುಕ್ರವಾರ ಬೆಳಿಗ್ಗೆ ಅಮೃತಸರದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತು.

1989–91ರ ಮಧ್ಯದಲ್ಲಿ ದೂರದರ್ಶನದಲ್ಲಿ ಪ್ರಸಾರಗೊಂಡಿದ್ದ ಉಡಾನ್ ಧಾರವಾಹಿಯಲ್ಲಿ ಕವಿತಾ ಚೌಧರಿ ಅವರು ಐಪಿಎಸ್ ಅಧಿಕಾರಿಯಾಗಿ ಅಭಿನಯಿಸಿದ್ದರು. ಆಗಿನ ಕಾಲದಲ್ಲಿ ಮಹಿಳೆಯೊಬ್ಬರು ಐಪಿಎಸ್ ಅಧಿಕಾರಿಯಾಗಿ ಅಭಿನಯಿಸಿದ್ದು ದೇಶದ ಗಮನ ಸೆಳೆದಿತ್ತು.

ವಿಶೇಷವೆಂದರೆ ಉಡಾನ್ ಕಥೆಯು, ಕವಿತಾ ಅವರ ಸಹೋದರಿ ಐಪಿಎಸ್ ಅಧಿಕಾರಿ ಕಾಂಚನ ಚೌಧರಿ ಭಟ್ಟಾಚಾರ್ಯ ಅವರ ಜೀವನಗಾಥೆಯನ್ನು ಹೊಂದಿತ್ತು. (ಇವರು ಕಿರಣ್ ಬೇಡಿ ನಂತರ ದೇಶದ ಎರಡನೇ ಮಹಿಳಾ ಐಪಿಎಸ್ ಅಧಿಕಾರಿ).

1980 ಹಾಗೂ 90ರ ದಶಕದಲ್ಲಿ ಕವಿತಾ ಅವರು ಅಭಿನಯಿಸಿದ್ದ ಸರ್ಫ್ ಎಕ್ಸೆಲ್ ಕಂಪನಿಯ ಸರ್ಫ್ ಡಿಟರ್ಜೆಂಟ್ ಪೌಡರ್ ಟಿ.ವಿ ಜಾಹೀರಾತು ಕೂಡ ಆಗ ಸಾಕಷ್ಟು ಗಮನ ಸೆಳೆದಿತ್ತು. ನಗರ ಪ್ರದೇಶಗಳ ಗೃಹಿಣಿಯರ ನೆಚ್ಚಿನ ಟಿ.ವಿ ಜಾಹೀರಾತು ಅದಾಗಿತ್ತು.

ಉಡಾನ್ ನಂತರ ಕವಿತಾ ಅವರು, ‘ಯುವರ್ ಆನರ್’ ಮತ್ತು ‘ಐಪಿಎಸ್ ಡೈರಿಸ್’ ಎಂಬ ಶೋಗಳನ್ನು ದೂರದರ್ಶನಕ್ಕಾಗಿ ನಿರ್ಮಿಸಿದ್ದರು. ಅಲ್ಲದೇ ಅವರು ಕೆಲ ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT