ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂತ್ರಧಾರಿ’ಯಾದ ಚಂದನ್ ಶೆಟ್ಟಿ

Last Updated 9 ಅಕ್ಟೋಬರ್ 2022, 9:08 IST
ಅಕ್ಷರ ಗಾತ್ರ

ಗಾಯಕ, ಗೀತರಚನೆಕಾರನಾಗಿ,‌ ಸಂಗೀತ ನಿರ್ದೇಶಕನಾಗಿ ಜನಪ್ರಿಯತೆ ಪಡೆದಿರುವ ಚಂದನ್ ಶೆಟ್ಟಿ, ಈಗ ನಾಯಕನಾಗಿಯೂ ಚಿರಪರಿಚಿತ. ಪ್ರಸ್ತುತ ಚಂದನ್ ಶೆಟ್ಟಿ ‘ಸೂತ್ರಧಾರಿ’ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಇದು ಅವರು ನಾಯಕನಾಗಿ ನಟಿಸುತ್ತಿರುವ ಎರಡನೇ ಚಿತ್ರ.

‘ಸೂತ್ರಧಾರಿ’ ಚಿತ್ರದ ಚಿತ್ರೀಕರಣ ಅಕ್ಟೋಬರ್ 10ರಿಂದ ಆರಂಭವಾಗಲಿದೆ.‌ ‘ಮೈ ಮೂವೀ ಬಜಾರ್’ನ ನವರಸನ್ ಈ ಚಿತ್ರ ನಿರ್ಮಿಸುತ್ತಿದ್ದು, ಕ್ರಿಯೇಟಿವ್ ಹೆಡ್ ಆಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಕಿರಣ್ ಕುಮಾರ್ ಈ ಚಿತ್ರದ ನಿರ್ದೇಶಕರು.

ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ನಡೆಯಿತು. ಚಿತ್ರಗಳ ಪ್ರಚಾರಕ ಸುಧೀಂದ್ರ ವೆಂಕಟೇಶ್ ಶೀರ್ಷಿಕೆ ಅನಾವರಣ ಮಾಡಿದರು.ನವರಸನ್‌ ಈ ಚಿತ್ರದ ನಿರ್ಮಾಪಕರು. ಅವರ ನಿರ್ಮಾಣದ 5ನೇ ಚಿತ್ರವಿದು.

ನಾಯಕನಾಗಿ ನಾನು ಅಭಿನಯಿಸುತ್ತಿರುವ ಮೊದಲ ಚಿತ್ರವಿದು. ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿದ್ದೇನೆ. ಕಿರಣ್ ಕುಮಾರ್ ಉತ್ತಮ ಕಥೆ ಬರೆದಿದ್ದಾರೆ. ಮರ್ಡರ್ ಮಿಸ್ಟರಿ ಕಥೆ‌ ಅಂತ ಹೇಳಬಹುದು. ಈ ಚಿತ್ರಕ್ಕಾಗಿ ನಾನು ಹನ್ನೆರಡು ಕೆ.ಜಿ. ತೂಕ ಇಳಿಸಿಕೊಂಡಿದ್ದೇನೆ. ಸಂಗೀತ ನಿರ್ದೇಶನವನ್ನೂ ನಾನೇ ಮಾಡುತ್ತಿದ್ದೇನೆ. ‌ಎಲ್ಲರೂ ಗುನುಗುವಂತಹ ಹಾಡುಗಳನ್ನು ಕೊಡುತ್ತೇನೆ ಎಂದು ಚಂದನ್ ಶೆಟ್ಟಿ ತಿಳಿಸಿದರು.

ತಬಲಾ ನಾಣಿ, ಗಣೇಶ್‌ ನಾರಾಯಣ್‌ ತಾರಾಗಣದಲ್ಲಿದ್ದಾರೆ. ಪಿ.ಕೆ.ಎಚ್‌. ದಾಸ್‌ ಛಾಯಾಗ್ರಹಣವಿದೆ. ಕಿನ್ನಾಳ ರಾಜ್‌ ಅವರ ಸಂಭಾಷಣೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT