ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸ್ಯ ನಟ ರಾಜು ಶ್ರೀವಾಸ್ತವ ನಿಧನ: ಅಭಿಮಾನಿಗಳ ಕಂಬನಿ

Last Updated 21 ಸೆಪ್ಟೆಂಬರ್ 2022, 6:11 IST
ಅಕ್ಷರ ಗಾತ್ರ

ನವದೆಹಲಿ:ಬಾಲಿವುಡ್‌ ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ ಅವರು ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ರಾಜು ಶ್ರೀವಾಸ್ತವ ಬುಧವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಆಗಸ್ಟ್ 10ರಂದು ಹೃದಯಾಘಾತದಿಂದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.ಮಿದುಳು ನಿಷ್ಕ್ರಿಯಗೊಂಡು, ಅವರಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರಿಗೆ ತ್ರೀವಾ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ರಾಜು ಶ್ರೀವಾಸ್ತವ ನಿಧನರಾಗಿದ್ದಾರೆ ಎಂದು ಏಮ್ಸ್‌ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ.

ನಟನ ನಿಧನಕ್ಕೆ ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ಸಂತಾಪಗಳನ್ನು ಸೂಚಿಸಿದ್ದಾರೆ.

ಕಾಮಿಡಿ ಲೆಜೆಂಡ್ ರಾಜು ಶ್ರೀವಾಸ್ತವಜಿ ಅವರ ನಿಧನದ ಸುದ್ದಿ ಕೇಳಿ ನೋವಾಗಿದೆ. ಅತ್ಯುತ್ತಮ ಮನೋರಂಜನೆ, ಅವರ ನಡವಳಿಕೆ ಮತ್ತು ಹಾಸ್ಯವು ನಮ್ಮ ಭಾರತೀಯರ ದೈನಂದಿನ ಜೀವನವನ್ನು ನಿಜವಾಗಿಯೂ ಪ್ರತಿಬಿಂಬಿಸುತ್ತದೆ. ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪ. ಓಂ ಶಾಂತಿ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸಂತಾಪ ಸೂಚಿಸಿದ್ದಾರೆ.

ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವಅವರ ನಿಧನದ ದುಃಖದ ಸುದ್ದಿ ಬಂದಿದೆ. ಅವರ ಅಗಲಿಕೆ ಕಲಾ ಲೋಕಕ್ಕೆ ತುಂಬಲಾರದ ನಷ್ಟ. ಈ ಕಷ್ಟದ ಸಮಯದಲ್ಲಿ ಅಗಲಿದ ಆತ್ಮಕ್ಕೆ ಅವರ ಪಾದದಡಿಯಲ್ಲಿ ಸ್ಥಾನ ನೀಡಲಿ ಮತ್ತು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ತಾಳ್ಮೆಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಮದು ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಸಂತಾಪ ಸೂಚಿಸಿದ್ದಾರೆ.

ಮೊದ ಮೊದಲು ಬಾಲಿವುಡ್‌ನ ಚಿಕ್ಕ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಜ ಶ್ರೀವಾಸ್ತವ, ಬಳಿಕ ತಮ್ಮ ಪ್ರತಿಭೆ ಮೂಲಕ ದೊಡ್ಡ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿದ್ದರು. 1989ರ ಮೇನೆ ಪ್ಯಾರ್ ಕಿಯಾ, 1993 ಬಾಜಿಗರ್ ಚಿತ್ರದಲ್ಲೂ ಗಮನ ಸೆಳೆದಿದ್ದರು.

1980 ರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಶೋ ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ ಮೊದಲ ಆವೃತ್ತಿ ಮೂಲಕ ಗುರುತಿಸಿಕೊಂಡಿದ್ದ ಅವರು, ಅಂದಿನಿಂದ ಮನರಂಜನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT