ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಸಂಜು ಬಸಯ್ಯ

ಜೀ ಕನ್ನಡ ವಾಹಿನಿ ಕಾಮಿಡಿ ಖಿಲಾಡಿಗಳು ಖ್ಯಾತಿಯ ನಟ ಸಂಜು ಬಸಯ್ಯ ಅವರು ಪಲ್ಲವಿ ಬಳ್ಳಾರಿ ಎನ್ನುವರನ್ನು ವಿವಾಹವಾಗಿದ್ದಾರೆ.
Published 10 ಜೂನ್ 2023, 14:20 IST
Last Updated 10 ಜೂನ್ 2023, 14:20 IST
ಅಕ್ಷರ ಗಾತ್ರ

ಬೆಂಗಳೂರು: ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಸಂಜು ಬಸಯ್ಯ ಅವರು ಪಲ್ಲವಿ ಬಳ್ಳಾರಿ ಎನ್ನುವರನ್ನು ವಿವಾಹವಾಗಿದ್ದಾರೆ.

ಈ ಕುರಿತು ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಂ (sanjubasayyafficial) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಿಜಿಸ್ಟರ್ ಮ್ಯಾರೇಜ್ ಆಗಿರುವುದಾಗಿ ಸಂಜು ಬಸಯ್ಯ ತಿಳಿಸಿದ್ದಾರೆ.

ಪಲ್ಲವಿ ಅವರು ಕೆಲ ಯುಟ್ಯೂಬ್ ವಿಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ಇಲ್ಲಿಯವರೆಗಿನ ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ನಾವು ತೆರೆ ಎಳೆದಿದ್ದೇವೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತ್ತು,ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ. ಈಗ ನಾವಿಬ್ಬರು ಕಾನೂನಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ನಮ್ಮ, ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸುಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ ,ಆಶೀರ್ವಾದ ನಮ್ಮ ಮೇಲೆ ಹೀಗೆ ಇರ್ಲಿ ನಿಜವಾದ ಪ್ರೀತಿಗೆ ಯಾವುದೇ ಜಾತಿ, ಧರ್ಮ ,ಇನ್ನಿತರ ಯಾವುದೇ ವಿಷಯಗಳು ಅಡ್ಡ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದೇವೆ, ನಿಜವಾದ ಪ್ರೀತಿಗೆ ಜಯ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ನಾವೇ ಕಾರಣ. ಇಂತಿ ನಿಮ್ಮ ಪ್ರೀತಿಯ ಸಂಜು ಬಸಯ್ಯ, ಪಲ್ಲವಿ ಬಳ್ಳಾರಿ’ ಎಂದು ಬರೆದುಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಮುರುಗೋಡು ಗ್ರಾಮದ ಸಂಜು, ಆರಂಭದಲ್ಲಿ ನಾಟಕ ಕಂಪನಿಗಳಲ್ಲಿ ಗುರುತಿಸಿಕೊಂಡಿದ್ದರು. ಜೀ ವಾಹಿನಿಯ ಕಾಮಿಡಿ ಕಿಲಾಡಿಗಳ ಮೂಲಕ ಜನಪ್ರಿಯರಾದರು. ಕೆಲ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT