ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನೇನಹಳ್ಳಿ ಗ್ರಾ.ಪಂ ಅಧ್ಯಕ್ಷಗಾದಿ ಕಾಂಗ್ರೆಸ್‌ ತೆಕ್ಕೆಗೆ

Last Updated 14 ಮಾರ್ಚ್ 2018, 7:18 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಎರಡನೇ ಅವಧಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸೌಂದರ್ಯ ಗೆಲುವು ಸಾಧಿಸಿದರು.

ಗ್ರಾ.ಪಂನಲ್ಲಿ 17 ಸದಸ್ಯರಿದ್ದು, ಈ ಪೈಕಿ 12 ಮಂದಿಯು ಶಾಸಕ ವರ್ತೂರು ಪ್ರಕಾಶ್‌ ಬಣದವರು. ಉಳಿದ 4 ಮಂದಿ ಕಾಂಗ್ರೆಸ್‌ ಹಾಗೂ ಒಬ್ಬರು ಜೆಡಿಎಸ್‌ ಬೆಂಬಲಿತ ಸದಸ್ಯರು. ಶಾಸಕರ ಬಣದ 5 ಸದಸ್ಯರು ಇತ್ತೀಚೆಗೆ ಕಾಂಗ್ರೆಸ್‌ ಪಾಳಯದಲ್ಲಿ ಗುರುತಿಸಿಕೊಂಡಿದ್ದರು.

ಕಾಂಗ್ರೆಸ್‌ ಪಾಳಯದಿಂದ ಅಧ್ಯಕ್ಷ ಸ್ಥಾನಕ್ಕೆ ಸೌಂದರ್ಯ ಮತ್ತು ಶಾಸಕರ ಬಣದಿಂದ ಮಲ್ಲಿಗಮ್ಮ ನಾಮಪತ್ರ ಸಲ್ಲಿಸಿದರು. ಅಂತಿಮವಾಗಿ ಚುನಾವಣೆ ನಡೆದು ಸೌಂದರ್ಯ ಪರ 9 ಸದಸ್ಯರು ಮತ ಚಲಾಯಿಸಿದರು. ಮಲ್ಲಿಗಮ್ಮ ಪರ 7 ಸದಸ್ಯರು ಮತ ಚಲಾಯಿಸಿದರು. ಜೆಡಿಎಸ್‌ ಬೆಂಬಲಿತ ಸದಸ್ಯ ಮಲ್ಲೇಶ್‌ಬಾಬು ಗೈರಾದರು. ಸೌಂದರ್ಯ 2 ಮತಗಳ ಅಂತರದಿಂದ ಜಯ ಗಳಿಸಿ ಅಧ್ಯಕ್ಷಗಾದಿ ಏರಿದರು.

ಮೊದಲ ಆದ್ಯತೆ: ನೂತನ ಅಧ್ಯಕ್ಷೆ ಸೌಂದರ್ಯ ಮಾತನಾಡಿ, ‘ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡುತ್ತೇನೆ. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ಸಂಗತಿ ಅರಿತು ಸಾರ್ವಜನಿಕರು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನೀರನ್ನು ಮಿತವಾಗಿ ಬಳಸಬೇಕು’ ಎಂದು ಹೇಳಿದರು.

ತಮ್ಮ ಗೆಲುವಿಗೆ ಕಾರಣರಾದ ಕಾಂಗ್ರೆಸ್ ಮುಖಂಡ ಚಿಕ್ಕರಾಯಪ್ಪ ಅವರಿಗೆ ಸೌಂದರ್ಯ ಕೃತಜ್ಞತೆ ಸಲ್ಲಿಸಿದರು. ಸದಸ್ಯರಾದ ಶ್ರೀನಾಥ್, ಮಂಜುನಾಥ್, ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT