‘ದೇವದಾಸ’ನನ್ನು ತೋರಿಸುವಲ್ಲಿ ಎಡವಿದರಾ?

7

‘ದೇವದಾಸ’ನನ್ನು ತೋರಿಸುವಲ್ಲಿ ಎಡವಿದರಾ?

Published:
Updated:

ಟಾಲಿವುಡ್‌ನ ಕಿಂಗ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಅಕ್ಕಿನೇನಿ ನಾಗರ್ಜುನ ಮತ್ತು ನ್ಯಾಚುರಲ್‌ ಸ್ಟಾರ್‌ ನಾನಿ ಜೊತೆಯಾಗಿ ನಟಿಸಿದ ಹಾಸ್ಯ ಮತ್ತು ಅಂಡರ್‌ವರ್ಲ್ಡ್ ಕಥೆಯನ್ನಾಧರಿಸಿದ ‘ದೇವದಾಸ್‌’ ಚಿತ್ರ ಮೊದಲ ದಿನವೇ ₹6.57 ಕೋಟಿ ಗಳಿಸಿ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತ್ತು. 

ದೇವ ಆಗಿ ನಾಗರ್ಜುನ ಮತ್ತು ದಾಸ್‌ ಆಗಿ ನಾನಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಿದ್ದರು. ಚಿತ್ರ ಬಿಡುಗಡೆಯಾದ ಐದೇ ದಿನಗಳಲ್ಲಿ ₹30 ಕೋಟಿ ಗಳಿಸಿತ್ತು. ಆದರೆ ನಿರೀಕ್ಷಿಸಿದಷ್ಟು ಯಶಸ್ಸು ಗಳಿಸುವಲ್ಲಿ ವಿಫಲವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಚಿತ್ರ ಬಿಡುಗಡೆಯಾದಾಗ ಪೈಪೋಟಿ ನೀಡುವಂತಹ ಯಾವುದೇ ಚಿತ್ರ ಬಿಡುಗಡೆಯಾಗಿರಲಿಲ್ಲ. ಸಾಲದ್ದಕ್ಕೆ ಸ್ಟಾರ್ ನಟರ ಚಿತ್ರ ಬೇರೆ. ಆದರೂ ಇಂತಹ ಅವಕಾಶವನ್ನು ನಿರ್ದೇಶಕ ಆದಿತ್ಯ ಸರಿಯಾಗಿ ಬಳಸಿಕೊಂಡಿಲ್ಲ ಎಂಬ ಮಾತುಗಳು ಕೃಷ್ಣಾನಗರದಲ್ಲಿ ಹರಿದಾಡುತ್ತಿವೆ.

ಭಾರತದಲ್ಲಷ್ಟೇ ಅಲ್ಲ, ಓವರ್‌ಸೀಸ್‌ನಲ್ಲೂ ಚಿತ್ರಕ್ಕೆ ಹೇಳಿಕೊಳ್ಳುವಷ್ಟು ಪ್ರತಿಕ್ರಿಯೆ ದೊರೆಯುತ್ತಿಲ್ಲ. ಸಾಮಾನ್ಯವಾಗಿ ಕ್ಲಾಸ್‌ ಮತ್ತು ಮಾಸ್‌ ಕಥೆಯನ್ನಾಧರಿಸಿದ ಚಿತ್ರಗಳಿಗೆ ಅಲ್ಲಿನ ಮಾರುಕಟ್ಟೆಯಲ್ಲಿ ಮನ್ನಣೆ ಇದೆ. ಅಲ್ಲದೇ ನಾಗರ್ಜುನ ಮತ್ತು ನಾನಿ ನಟನೆಯ ಚಿತ್ರಗಳಿಗೆ ಬೇಡಿಕೆಯೂ ಇದೆ. ಆದರೂ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಬಿಡುಗಡೆಯಾಗಿ ವಾರ ಕಳೆದರೂ ಬಿಲಿಯನ್ ಡಾಲರ್ ಕ್ಲಬ್‌ಗೆ ಸೇರದಿರುವುದು ನಿರಾಸೆ ಮೂಡಿಸಿದೆ. 

ಬಿಲಿಯನ್ ಡಾಲರ್ ಕ್ಲಬ್‌ಗೆ ಸೇರುವುದಕ್ಕೇ ಎರಡು ವಾರ ಹಿಡಿಸಿದರೆ, ಪೂರ್ತಿ ವಸೂಲಾಗಲೂ ಇನ್ನೂ ಎರಡು ವಾರ ಬೇಕಾಗಬಹುದು. ಇಷ್ಟರಲ್ಲಿ ವಿಜಯ್ ದೇವರಕೊಂಡ ನಟನೆಯ ‘ನೋಟ’ ಮತ್ತು ಜೂ.ಎನ್‌ಟಿಆರ್ ನಟನೆಯ ‘ಅರವಿಂದ ಸಮೇತ ವೀರ ರಾಘವ’ ಚಿತ್ರ ಪೈಪೋಟಿ ನೀಡಿದರೆ ಇನ್ನೂ ಕಷ್ಟವಾಗಬಹುದು. 

ಪ್ರಸ್ತುತ ಭಾರತ ಮತ್ತು ವಿದೇಶಿ ಮಾರುಕಟ್ಟೆಗಳೆರಡರಲ್ಲೂ ಚಿತ್ರ ಹೇಳಿಕೊಳ್ಳುವಷ್ಟು ಗೆಲುವನ್ನು ಬಾಚಿಕೊಂಡಿಲ್ಲ. ಡಿಸಾಸ್ಟರ್ ಎಂಬ ಹಣೆ ಪಟ್ಟಿ ಕಟ್ಟಿಕೊಳ್ಳದಿದ್ದರೂ ಚಿತ್ರಕ್ಕೆ ಹೂಡಿಕೆ ಮಾಡಿರುವ ಮೊತ್ತ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಅದರ ಆಧಾರವಾಗಿ ಹಿಟ್‌ ಅಥವಾ ಫ್ಲಾಪ್‌ ಎಂಬುದು ಈ ವಾರ ನಿರ್ಧಾರವಾಗಲಿದೆ.

ಇನ್ನು ‘ಗೀತ ಗೋವಿಂದಂ’ ಚಿತ್ರದ ಮೂಲಕ ಗಮನ ಸೆಳೆದ ರಷ್ಮಿಕಾ ಮಂದಣ್ಣ  ಈ ಚಿತ್ರದಲ್ಲೂ ತಮ್ಮ ಅಭಿನಯದ ಮೂಲಕ  ರಂಜಿಸಿದ್ದರು. ಈಗ ಸಾಲು ಸಾಲು ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿದ್ದು, ಟಾಲಿವುಡ್‌ನ ಅದೃಷ್ಟಶಾಲಿ ನಾಯಕನಟಿ ಎಂಬ ಮಾತುಗಳೂ ಅವರ ಸುತ್ತ ಹರಿದಾಡುತ್ತಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !