ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವರನಟ ಡಾ.ರಾಜ್‌ಕುಮಾರ್‌ 17ನೇ ವರ್ಷದ ಪುಣ್ಯತಿಥಿ: ಅಭಿಮಾನಿಗಳಿಂದ ಸ್ಮರಣೆ

Last Updated 12 ಏಪ್ರಿಲ್ 2023, 11:39 IST
ಅಕ್ಷರ ಗಾತ್ರ

ಬೆಂಗಳೂರು: ಇಂದು (ಏ.12) ಕನ್ನಡದ ವರನಟ ನಟಸಾರ್ವಭೌಮ ಡಾ.ರಾಜ್‌ಕುಮಾರ್‌ ಅವರ 17ನೇ ವರ್ಷದ ಪುಣ್ಯತಿಥಿ. ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದಾರೆ.

ಅಲ್ಲದೇ ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿಯ ರಾಜ್ ಸಮಾಧಿಗೆ ಡಾ.ರಾಜ್ ಕುಟುಂಬ ಸೇರಿದಂತೆ ಅನೇಕ ಅಭಿಮಾನಿಗಳು ಆಗಮಿಸಿ ಪೂಜೆ ಸಲ್ಲಿಸಿದರು.

ಟ್ವೀಟ್‌ ಮೂಲಕವೂ ಅಪ್ಪನನ್ನು ನೆನೆದಿರುವ ರಾಘವೇಂದ್ರ ರಾಜಕುಮಾರ್ ಅವರು ಹಳೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ ಇದರಲ್ಲಿ ರಾಜ್‌ಕುಮಾರ್‌ ಅವರ ಜೊತೆಗೆ ಕುಟುಂಬದ ಸದಸ್ಯರು ಇರುವ ಸಂಗ್ರಹ ಚಿತ್ರಗಳಿವೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು, ಕೋಟ್ಯಂತರ ಅಭಿಮಾನಿಗಳ ಹೃದಯಮಂದಿರದಲ್ಲಿ ಸದಾ ಚಿರಸ್ಥಾಯಿಯಾಗಿರುವ ನಾಡಿನ ಹೆಮ್ಮೆ,ಕಲಾಸರಸ್ವತಿಯ ವರಪುತ್ರ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ , ಡಾ|| ರಾಜ್ ಕುಮಾರ್ ರವರ ಪುಣ್ಯಸ್ಮರಣೆಯಂದು ಅವರಿಗೆ ಅಭಿಮಾನಪೂರ್ವಕ ನಮನಗಳು ಎಂದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಡಾ.ರಾಜ್ ಕುಮಾರ್ ಅವರ ಸಾಟಿಯಿಲ್ಲದ ಕಲಾ ಪ್ರತಿಭೆ, ನಾಡಿನ ನೆಲ-ಜಲ-ಭಾಷೆಯ ಮೇಲಿನ ಅಭಿಮಾನ‌ ಮತ್ತು ಸಾಮಾಜಿಕ ಕಳಕಳಿ ನಮಗೆಲ್ಲ ಸದಾ ದಾರಿದೀಪ. ಈ ಪುಣ್ಯಜೀವಿಯ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳು ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಡಾ.ರಾಜ್‌ಕುಮಾರ್ ಎಂಬ ಹೆಸರು ಕನ್ನಡಿಗರ ಹೆಗ್ಗುರುತು. ನಟನೆಯ ಜೊತೆಗೆ ಸಾಮಾಜಿಕ ಕಳಕಳಿಯೊಂದಿಗೆ ಜನಮನ ಗೆದ್ದ ನಟಸಾರ್ವಭೌಮ ನಮ್ಮ ಅಣ್ಣಾವ್ರು. ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ ಅವರ ಪುಣ್ಯಸ್ಮರಣಾ ದಿನದಂದು ಹೃದಯಾಂತರಾಳದ ನಮನಗಳು ಎಂದಿದ್ದಾರೆ.

ಅಲ್ಲದೇ ಅನೇಕ ನಟ ನಟಿಯರು ಅಭಿಮಾನಿಗಳು ರಾಜಕಾರಣಿಗಳು ಉದ್ಯಮಿಗಳು ಯುವಕ–ಯುವತಿಯರು ಡಾ.ರಾಜ್ ಅವರನ್ನು ಸ್ಮರಿಸಿದ್ದಾರೆ.

1929ರ ಏಪ್ರಿಲ್ 24 ರಂದು ಜನಿಸಿದ್ದ ರಾಜ್ ಅವರು 2006ರ ಏಪ್ರಿಲ್ 12 ರಂದು ಬೆಂಗಳೂರಿನಲ್ಲಿ ತಮ್ಮ 76ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿ ಜನಮನ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT