ಬುಧವಾರ, ಮೇ 18, 2022
24 °C

’ಭೀಮ’ನಾದ ದುನಿಯಾ ವಿಜಯ್‌: ಚಿತ್ರದ ಕೆಲಸಗಳು ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಲಗ ಖ್ಯಾತಿಯ ದುನಿಯಾ ವಿಜಯ್‌ ನಿರ್ದೇಶನ ಮಾಡುತ್ತಿರುವ ’ಭೀಮ’ ಚಿತ್ರ ಲಾಂಚ್ ಆಗಿದೆ ಎಂದು ಚಿತ್ರತಂಡ ಅಪ್ಡೇಟ್‌ ನೀಡಿದೆ. 

ಈ ಬಗ್ಗೆ ಚಿತ್ರತಂಡ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದೆ. ಇತ್ತೀಚೆ ಚಿತ್ರದ ಮುಹೂರ್ತ ನಡೆದಿದೆ. ಈ ಸಂದರ್ಭದಲ್ಲಿ ದುನಿಯಾ ವಿಜಯ್‌ ಸೇರಿದಂತೆ ಹಲವಾರ ನಟ ಭಾಗವಹಿಸಿದ್ದರು.

ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದ ವಿಜಯ್‌ ಈಗ ಭೀಮಾ ಚಿತ್ರಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಲ್ಲಿದ್ದಾರೆ ಎಂದು ಚಿತ್ರತಂಡ ಹೇಳಿದೆ. 
ಇನ್ನು ಸಿನಿಮಾ ಪಾತ್ರಗಳು ಹಾಗೂ ತಾಂತ್ರಿಕ ವರ್ಗಗಳ ಬಗ್ಗೆ ಅಧಿಕೃತವಾಗಿ ಪ್ರಕಟಿಸಬೇಕಿದೆ. 

ಸಲಗ ಸಿನಿಮಾ ರೀತಿಯಲ್ಲಿ ಭೀಮ ಚಿತ್ರದಲ್ಲಿ ಮನರಂಜನೆ ಇರಲಿದೆ. ಹಾಗೇ ಯುವಕರಿಗೆ ಸಂದೇಶ ಕೂಡ ಇರಲಿದೆ ಎಂದು ವಿಜಯ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು