ಗುರುವಾರ , ಮಾರ್ಚ್ 23, 2023
29 °C

ಫೆಮಾ ಪ್ರಕರಣ: ನಟಿ ಯಾಮಿಗೆ ಇ.ಡಿ ನೋಟಿಸ್‌ ಜಾರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿದೇಶಿ ವಿನಿಮಯ ಕಾನೂನಿಗೆ ಸಂಬಂಧಿಸಿದ ಫೆಮಾ (ಎಫ್ಇಎಂಎ) ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟಿ ಯಾಮಿ ಗೌತಮ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್‌ ಜಾರಿಗೊಳಿಸಿದೆ.

32 ವರ್ಷದ ನಟಿ ಯಾಮಿ ಗೌತಮ್ ಅವರಿಗೆ ಈ ಹಿಂದೆಯೂ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ ಅವರು ತನಿಖಾ ಸಂಸ್ಥೆ ಎದುರು ಹಾಜರಾಗಿರಲಿಲ್ಲ. ಯಾಮಿ ಅವರ ಬ್ಯಾಂಕ್ ಖಾತೆಗೆ ₹ 1.5 ಕೋಟಿ ಜಮಾ ಆಗಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಇದೇ 7ರಂದು ದಕ್ಷಿಣ ಮುಂಬೈನ ಕೇಂದ್ರ ತನಿಖಾ ಸಂಸ್ಥೆಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ಸೂಚಿಸಲಾಗಿದೆ.

ಹಿಂದಿ, ತಮಿಳು, ತೆಗುಲು ಸಿನಿಮಾಗಳಲ್ಲಿ ಯಾಮಿ ಗೌತಮ್ ನಟಿಸಿದ್ದಾರೆ. ಕಳೆದ ತಿಂಗಳು ನಿರ್ಮಾಪಕ ಆದಿತ್ಯ ಧರ್ ಅವರನ್ನು ಯಾಮಿ ವಿವಾಹವಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು