‘ಆಟಕ್ಕುಂಟು...’ ಗ್ರಾಫಿಕ್ಕೂ ಉಂಟು!

7

‘ಆಟಕ್ಕುಂಟು...’ ಗ್ರಾಫಿಕ್ಕೂ ಉಂಟು!

Published:
Updated:

ವಸುಂಧರ ಕೃತಿಕ್ ಫಿಲಂಸ್‍ಲಾಂಛನದಲ್ಲಿ ನಿರ್ಮಾಣಗೊಂಡಿರುವ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿದೆ. ಚಿತ್ರೀಕರಣವನ್ನೆಲ್ಲ ಮುಗಿಸಿ ಹಿನ್ನೆಲೆ ಸಂಗೀತ ಅಳವಡಿಸುವ ಕೆಲಸವನ್ನೂ ಮುಗಿಸಿರುವ ತಂಡ ಇದೀಗ ಕಂಪ್ಯೂಟರ್ ಗ್ರಾಫಿಕ್ ಕೆಲಸದಲ್ಲಿ ಮಗ್ನವಾಗಿದೆ. 450 ಶಾಟ್‌ಗಳಿಗೆ ಕಂಪ್ಯೂಟರ್ ಗ್ರಾಫಿಕ್ಸ್ ಅಗತ್ಯ ಇದೆಯಂತೆ. ಒಟ್ಟು ಸಿನಿಮಾದಲ್ಲಿ 35 ನಿಮಿಷಗಳ ದೃಶ್ಯಗಳಲ್ಲಿ ಸಿಜಿ ಕೆಲಸ ಮೇಳೈಸಲಿದೆ.

ಈ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ ವನ್ನು ರಾಮಚಂದ್ರ ಮಾಡಿದ್ದಾರೆ. ಪರಮೇಶ್.ಸಿ.ಎಂ ಛಾಯಾಗ್ರಹಣ, ನಾಬಿನ್ ಪೌಲ್ ಸಂಗೀತ ಚಿತ್ರಕ್ಕಿದೆ. ಸೈಕಾಲಾಜಿಕಲ್, ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದಲ್ಲಿ  ಸಂಚಾರಿ ವಿಜಯ್, ಮಯೂರಿ, ಶೋಭರಾಜ್, ದುನಿಯಾ ರಶ್ಮಿ, ಅಚ್ಯುತ್ ಕುಮಾರ್, ಭರತ್ ಸಾಗರ್, ಗೌತಮ್, ಮುಂತಾದವರಿದ್ದಾರೆ.

*

‘ಗಹನ’ವಾದ ಮಾತುಕತೆ
ಓಂ ಶ್ರೀ ಸಾಯಿರಾಂ ಫಿಲಂಸ್ ಲಾಂಛನದಲ್ಲಿ ಆರ್. ಶ್ರೀನಿವಾಸ್ (ಸ್ಟಿಲ್‍ಸೀನು) ನಿರ್ಮಾಣ ಮಾಡಿರುವ ‘ಗಹನ’ ಚಿತ್ರಕ್ಕೆ ಚಾಮರಾಜಪೇಟೆಯ ಅರುಣ್ ಸ್ಟುಡಿಯೊನಲ್ಲಿ ಧ್ವನಿಜೋಡಣೆ ಕಾರ್ಯ ನಡೆಯುತ್ತಿದೆ.

ಈ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ, ನಿರ್ದೇಶನವನ್ನು ಪ್ರೀತ್ ಹಾಸನ್ ಮಾಡಿದ್ದಾರೆ. ಸಾಯಿ ಶ್ರೀನಿವಾಸ್ ಛಾಯಾಗ್ರಹಣವಿದೆ. ರಘು ಮತ್ತು ಧನವಂತ್ರಿ ಸಂಗೀತ ಸಂಯೋಜಿಸಿದ್ದಾರೆ. ವಿಜಯ್ ವಿಶ್ವಮಣಿ ಹಾಡುಗಳನ್ನು ಬರೆದಿದ್ದಾರೆ.

ಆದಿತ್ಯ ಶೆಟ್ಟಿ, ಶರಣ್ಯಾ ಗೌಡ, ರಂಜಿನಿ, ಶಿವು, ಇಂಚರಾ ಭೀಮಯ್ಯ ಇದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತುವುಳ್ಳ ಚಿತ್ರದ ಚಿತ್ರೀಕರಣ, ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮಡಿಕೇರಿ ಸುತ್ತಮುತ್ತ ನಡೆಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !