ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವನಿ ಸಮಸ್ಯೆ ಹಿನ್ನೆಲೆಯಲ್ಲಿ ಗಾಯನದಿಂದ ಕೆಲಕಾಲ ದೂರ ಉಳಿದಿದ್ದ ಲತಾ ದೀದಿ  

Last Updated 6 ಫೆಬ್ರುವರಿ 2022, 14:12 IST
ಅಕ್ಷರ ಗಾತ್ರ

ಇಂದೋರ್‌: ಸಾವಿರಾರು ಗೀತೆಗಳಿಗೆ ತಮ್ಮ ಮಧುರ ಕಂಠವನ್ನು ನೀಡಿದ ಗಾಯಕಿ ಲತಾ ಮಂಗೇಶ್ಕರ್‌ ಅವರು ತಮ್ಮ ಧ್ವನಿ ತಂತುಗಳ ಸಮಸ್ಯೆಯಿಂದ ಖ್ಯಾತ ಶಾಸ್ತ್ರೀಯ ಗಾಯಕ ಉಸ್ತಾದ್‌ ಅಮೀರ್‌ ಖಾನ್ ಅವರ ಸಲಹೆಯ ಮೇರೆಗೆ ಕೆಲವು ತಿಂಗಳುಗಳ ಕಾಲ ಗಾಯನದಿಂದ ದೂರ ಉಳಿದಿದ್ದರು.

ಇದು ಬಹುತೇಕ ಸಂಗೀತ ಪ್ರಿಯರಿಗೆ ತಿಳಿಯದ ಮಾಹಿತಿಯಾಗಿದೆ. ಈ ವೇಳೆ ಮಂಗೇಶ್ಕರ್‌ ಅವರು ಮೌನ ವ್ರತ ತಾಳುವ ಮೂಲಕ ಗಾಯನಕ್ಕೆ ವಿರಾಮ ನೀಡಿದ್ದರು. ನಂತರ ಧ್ವನಿವರ್ಧಕದ ಮೂಲಕ ತಮ್ಮ ಗಾಯನವನ್ನು ಮುಂದುವರೆಸಿದರು.

2010ರ ಫೆಬ್ರುವರಿ 21 ರಂದು ಇಂದೋರ್‌ನಲ್ಲಿ ನಡೆದ ‘ನಾನು ಮತ್ತು ನನ್ನ ಅಕ್ಕ’ ಹೆಸರಿನ ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್‌ ಅವರ ಕಿರಿಯ ಸಹೋದರ ಹಾಗೂ ಸಂಗೀತ ನಿರ್ದೇಶಕ ಹೃದಯನಾಥ್‌ ಮಂಗೇಶ್ಕರ್‌ ಅವರು ಈ ಮಾಹಿತಿ ಬಹಿರಂಗಪಡಿಸಿದರು ಎಂದು ಕಾರ್ಯಕ್ರಮದ ನಿರೂಪಕರಾಗಿದ್ದ ಸಂಜಯ್‌ ಪಟೇಲ್‌ ಸ್ಮರಿಸಿಕೊಂಡರು.

1960ರ ಸಂದರ್ಭದಲ್ಲಿ ಉನ್ನತ ಸ್ಥಾಯಿಗಳನ್ನು ಹಾಡುವಾಗ ತನ್ನ ಅಕ್ಕ ಲತಾ ಅವರಿಗೆ ಸ್ವಲ್ಪ ಧ್ವನಿ ತಂತುಗಳ ಸಮಸ್ಯೆ ಉಂಟಾಗಿತ್ತು. ಅವರ ಜೀವನದಲ್ಲಿ ಮೊದಲ ಬಾರಿ ಈ ರೀತಿ ಸಮಸ್ಯೆ ಉಂಟಾಗಿತ್ತು. ಇದನ್ನು ಗಾಯಕ ಉಸ್ತಾದ್ ಅಮೀರ್‌ ಖಾನ್‌ ಅವರ ಬಳಿ ಹಂಚಿಕೊಂಡಾಗ ಗಾಯನದಿಂದ ಸ್ವಲ್ಪಕಾಲ ವಿರಾಮ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ. ಅದರಂತೆ ಗಾಯನ ವೃತ್ತಿಯ ಉನ್ನತ ಹಂತದಲ್ಲಿದ್ದ ತನ್ನ ಅಕ್ಕ ಲತಾ ಅವರು ಹಾಡುವುದರಿಂದ ವಿರಾಮ ತೆಗೆದುಕೊಂಡರು ಎಂದು ಹೃದಯನಾಥ್‌ ಹೇಳಿದ್ದನ್ನು ಪಟೇಲ್‌ ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT