ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾಡ್ಜ್‌ಬಾಲ್‌: ಮಹಿಳೆಯರ ತಂಡ ರನ್ನರ್ಸ್‌ ಅಪ್‌

Published 18 ಮೇ 2024, 14:06 IST
Last Updated 18 ಮೇ 2024, 14:06 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಹಿಳೆಯರ ಡಾಡ್ಜ್‌ಬಾಲ್‌ ತಂಡವು ತೆಲಂಗಾಣದ ರಾಮಗೊಂಡಂನಲ್ಲಿ ನಡೆದ ಐಡಿಬಿಎಫ್‌ ಡಾಡ್ಜ್‌ಬಾಲ್‌ ಫೆಡರೇಷನ್‌ ಕಪ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಸ್ಥಾನವನ್ನು ಪಡೆದುಕೊಂಡಿತು.

ಶುಕ್ರವಾರ ನಡೆದ ಫೈನಲ್‌ನಲ್ಲಿ ಹರಿಯಾಣ ತಂಡವು 13–12ರಿಂದ ಕರ್ನಾಟಕವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಗುಜರಾತ್‌ ಮತ್ತು ಮಧ್ಯಪ್ರದೇಶ ತಂಡಗಳು ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನವನ್ನು ಪಡೆದುಕೊಂಡವು.

ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡವು ಮೂರನೇ ಸ್ಥಾನ ಪಡೆಯಿತು. ಇಲ್ಲೂ ಹರಿಯಾಣ ತಂಡವು ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡರೆ, ತಮಿಳುನಾಡು ರನ್ನರ್ಸ್‌ ಅಪ್‌ ಆಯಿತು. ಮಹಾರಾಷ್ಟ್ರ ತಂಡವು ನಾಲ್ಕನೇ ಸ್ಥಾನ ಪಡೆಯಿತು.

ಟೂರ್ನಿಯಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ವಿವಿಧ ರಾಜ್ಯಗಳ ತಲಾ 10 ತಂಡಗಳು ಪಾಲ್ಗೊಂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT