ಹೊಸತನದ ಪಾತ್ರಗಳ ನಿರೀಕ್ಷೆಯಲ್ಲಿ ಇತಿ...

7

ಹೊಸತನದ ಪಾತ್ರಗಳ ನಿರೀಕ್ಷೆಯಲ್ಲಿ ಇತಿ...

Published:
Updated:
Deccan Herald

ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ಅಭಿನಯದ ‘ಕವಚ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ‘ದಿ ವಿಲನ್‌’ ಬಿಡುಗಡೆಯಾಗಿ ಕೆಲವು ದಿನಗಳ ನಂತರ ಈ ಚಿತ್ರ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಶಿವಣ್ಣ ಅವರೊಂದಿಗೆ ತೆರೆ ಹಂಚಿಕೊಂಡಿರುವ ಕನ್ನಡದ ಹುಡುಗಿ ಇತಿ ಆಚಾರ್ಯ ಅವರಿಗೆ ‘ಕವಚ’ ಚಿತ್ರ ಭರಪೂರ ನಿರೀಕ್ಷೆಗಳನ್ನು ಮೂಡಿಸಿದೆ.

‘ಕವಚ’ ಸಿನಿಮಾ ಕೇವಲ ಒಂದು ವರ್ಗದ ಜನರಿಗಷ್ಟೇ ಇಷ್ಟವಾಗುವ ಸಿನಿಮಾ ಅಲ್ಲ. ಇದೊಂದು ಕೌಟುಂಬಿಕ ಮನರಂಜನಾತ್ಮಕ ಸಿನಿಮಾ. 15 ವಿಭಿನ್ನ ಪಾತ್ರಗಳು ಈ ಸಿನಿಮಾದಲ್ಲಿವೆ. ಕಿರಿಯ ಹಾಗೂ ಹಿರಿಯ ಜನಪ್ರಿಯ ಕಲಾವಿದರು, ರಂಗಭೂಮಿ ನಟರು ಚಿತ್ರದಲ್ಲಿದ್ದಾರೆ. ಈ ಸಿನಿಮಾದಲ್ಲಿ ನಾನು ಪಂಜಾಬಿ ಹುಡುಗಿಯ ಪಾತ್ರ ನಿರ್ವಹಿಸಿದ್ದೇನೆ. ತುಂಬ ಬಬ್ಲಿ ಕ್ಯಾರೆಕ್ಟರ್‌ ಅದು. ಸ್ಯಾಂಡಲ್‌ವುಡ್‌ನಲ್ಲಿ ತುಂಬ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಸಿನಿಮಾ ಕವಚ. ಹಾಗಾಗಿ, ಈ ಸಿನಿಮಾದ ಒಂದು ಭಾಗ ಆಗಿರುವ ನನಗೂ ಕೂಡ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳಿವೆ’ ಎನ್ನುತ್ತಾರೆ ಚೆಲುವೆ ಇತಿ ಆಚಾರ್ಯ.

ಒಂದೇ ಬಗೆಯ ‍ಪಾತ್ರಗಳನ್ನು ಮಾಡುವುದಕ್ಕೆ ಸುತಾರಾಂ ಇಷ್ಟವಿಲ್ಲ ಎನ್ನುವ ಇತಿ ಆಚಾರ್ಯ ಈಗ ತನ್ನ ನಟನಾ ಪ್ರತಿಭೆಗೆ ಸಾಣೆ ಹಿಡಿಯುವ ಹುಮ್ಮಸ್ಸಿನಲ್ಲಿದ್ದಾರೆ. ನಟನಾ ತರಗತಿಗೆ ಸೇರಿಕೊಂಡಿರುವ ಇತಿ ಆಚಾರ್ಯ ಅಲ್ಲಿ ಭಿನ್ನ ಬಗೆಯ ಪಾತ್ರಗಳಿಗೆ ಜೀವ ತುಂಬುವ ಕೌಶಲವನ್ನು ಅರಿಯುವ ಯತ್ನದಲ್ಲಿ ಇದ್ದಾರೆ.

‘ಕವಚ ಸಿನಿಮಾ ಮಾಡಿದ ನಂತರ ನನ್ನ ಅಭಿನಯ ಕೌಶಲವನ್ನು ಮತ್ತಷ್ಟು ತೀಡಿಕೊಳ್ಳಬೇಕು ಅಂತ ಅನಿಸಿತು. ಅದಕ್ಕೆಂದೇ ಅಭಿನಯ ತರಗತಿಗೆ ಸೇರಿಕೊಂಡೆ. ಪಾತ್ರಕ್ಕೆ ತಕ್ಕಂತೆ ಬಾಡಿ ಲಾಂಗ್ವೇಜ್‌ ಇರಬೇಕು. ಅದನ್ನು ಇಲ್ಲಿ ಕಲಿಯುತ್ತಿದ್ದೇನೆ. ನನಗೆ ಪೋಷಕ ಪಾತ್ರಗಳಲ್ಲಿ ನಟಿಸುವುದಕ್ಕೆ ಇಷ್ಟವಿಲ್ಲ. ನಾಯಕನಟಿಯಾಗಿ ಕಾಣಿಸಿಕೊಳ್ಳುವುದೇ ತುಂಬ ಇಷ್ಟ. ಹಾಗಾಗಿ, ಈವರೆಗೆ ಅನೇಕ ಆಫರ್‌ಗಳು ಬಂದರೂ ಯಾವುದನ್ನೂ ಒಪ್ಪಿಕೊಂಡಿಲ್ಲ. ಉತ್ತಮ ಸ್ಕ್ರಿಪ್ಟ್‌, ಕಸುಬುದಾರ ನಿರ್ದೇಶಕರು ಸಿಗಬೇಕು. ಧಾವಂತ ಏನಿಲ್ಲ, ಅಲ್ಲೀವರೆಗೆ ಕಾಯುತ್ತೇನೆ’ ಎಂದು ಹೇಳುವ ಇತಿ ಆಚಾರ್ಯ, ಈಗ ಆ್ಯಡ್‌ ಶೂಟ್‌ ಮತ್ತು ಕಿರುಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !