‘ಶಹೀದ್ ಉಧಮ್ ಸಿಂಗ್’ ಚಲನಚಿತ್ರ ಪ್ರದರ್ಶನ

ಗುರುವಾರ , ಏಪ್ರಿಲ್ 25, 2019
31 °C

‘ಶಹೀದ್ ಉಧಮ್ ಸಿಂಗ್’ ಚಲನಚಿತ್ರ ಪ್ರದರ್ಶನ

Published:
Updated:
Prajavani

ಉನ್ನತಿ ಸಾಂಸ್ಕೃತಿಕ ಕೇಂದ್ರದ ಚಿತ್ರಭೂಮಿ ಸಿನೆಮಾ ಅಧ್ಯಯನ ವಿಭಾಗವು ಪ್ರತಿ ಶನಿವಾರ ಚಲನಚಿತ್ರ ಪ್ರದರ್ಶನ ಹಾಗು ವಿಚಾರ ವಿಮರ್ಶೆಯ ಕಾರ್ಯಕ್ರಮವನ್ನು ನಡೆಸುತ್ತಿದೆ.

ಏ.13 ರಂದು ಸಂಜೆ 6.30ಕ್ಕೆ ಸರ್ದಾರ್ ಉಧಮ್ ಸಿಂಗ್ ಪ್ರದರ್ಶನವಿದೆ. ಅದಕ್ಕೂ ಮುಂಚೆ ಸಂಜೆ 5 ಗಂಟೆಗೆ ಸಾಹಿತಿ ಶಿವಸುಂದರ್ ಅವರು ಜಲಿಯನ್ ವಾಲಾಬಾಗ್ ಇತಿಹಾಸ ಪುಟಗಳಲ್ಲಿ ಅಡಗಿರುವ ಸಂಗತಿಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ. ಚಿತ್ರಪ್ರದರ್ಶನದ ನಂತರ ಚಿತ್ರದ ಬಗ್ಗೆ ಚರ್ಚೆ ನಡೆಯಲಿದೆ.

1919 ಏಪ್ರಿಲ್ 13 ರಂದು ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಭಾರತದ ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದ ಬೆಚ್ಚಿ ಬೀಳಿಸುವಂಥ ಘಟನೆ. ಬ್ರಿಟಿಷ ಆಳ್ವಿಕೆಯ ಕಾಲದಲ್ಲಿ ನಡೆದ ಅತ್ಯಂತ ಹೀನ ನರಮೇಧ. ಈ ಹತ್ಯಾಕಾಂಡ ನಡೆದು ನೂರು ವರ್ಷಗಳು ಸಂದಿವೆ. ಅತ್ಯಂತ ನೋವಿನ ಈ ಇತಿಹಾಸದ ಸಂದರ್ಭದಲ್ಲಿ ಅಂದು ಅಲ್ಲಿ ಮಡಿದ ಎಲ್ಲರಿಗೆ ಗೌರವನ್ನು ಸಲ್ಲಿಸಲು ‘ಉನ್ನತಿ’ ಸಾಂಸ್ಕೃತಿಕ ಕೇಂದ್ರ ಉದ್ಯುಕ್ತವಾಗಿದೆ.

ಇದರ ಭಾಗವಾದ ಚಿತ್ರಭೂಮಿ ಸಿನೆಮಾ ಅಧ್ಯಯನ ವಿಭಾಗವು ಈ ಏಪ್ರಿಲ್ ತಿಂಗಳಿನ ಶನಿವಾರಗಳಂದು ಸಂಜೆ 6.30ಕ್ಕೆ ಸ್ವಾತಂತ್ರ್ಯ ಸಂಗ್ರಾಮದ ಕಥೆಗಳನ್ನು ಆಧರಿಸಿದ ಚಲನಚಿತ್ರಗಳನ್ನು ಪ್ರದರ್ಶಿಸಿ ನಂತರ ಚರ್ಚೆ ನಡೆಸುತ್ತಿದೆ.

ಏ. 20ರಂದು ಮೆಸ್ಸಿ ಸಾಹಿಬ್, ಹಾಗು 27ರಂದು ಪಾರ್ಟಿಷನ್ 1947 ಎಂಬ ಚಲನಚಿತ್ರಗಳ ಪ್ರದರ್ಶನ ಹಾಗು ಭಾರತದ ಸ್ವಾತಂತ್ರ್ಯ ಸಂಗ್ರಾಮ ಕುರಿತು ವಿಚಾರ ವಿಮರ್ಶೆಯನ್ನು ಏರ್ಪಡಿಸಲಾಗಿದೆ. ಪ್ರವೇಶ ಉಚಿತ.

ಸ್ಥಳ: ಉನ್ನತಿ ಸಭಾಂಗಣ, ನಂ.311, 1ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಸಪ್ತಗಿರಿ ನಗರ, ಹೊಸಕೆರೆಹಳ್ಳಿ, ಬನಶಂಕರಿ 3ನೆ ಹಂತ. ಸಂಜೆ 5.
ಪ್ರವೇಶ ಉಚಿತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !