ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಜೋಕರ್‌

Last Updated 29 ಜನವರಿ 2020, 19:45 IST
ಅಕ್ಷರ ಗಾತ್ರ

ಜೋಕಿನ್‌ ಫೋನಿಕ್ಸ್‌ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ‘ಜೋಕರ್‌’ ಮತ್ತೆ ಭಾರತದಲ್ಲಿ ಪ್ರೇಮಿಗಳ ದಿನದಂದೇ ಬಿಡುಗಡೆ ಕಾಣಲಿದೆ. ಅವತ್ತು ವ್ಯಾಲಂಟೈನ್ಸ್‌ ಡೇ ಇರುವುದು ಈ ಮರುಬಿಡುಗಡೆಗೆ ಕಾರಣವಲ್ಲ. ಆ ವೇಳೆಗೆ ಈ ವರ್ಷದ ಆಸ್ಕರ್‌ (ಅಕಾಡೆಮಿ) ಪ್ರಶಸ್ತಿಗಳು ಘೋಷಣೆಯಾಗಿ ನಾಲ್ಕು ದಿನ ಕಳೆದಿರುತ್ತದೆ. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯ ಉತ್ತಮ ನಟ, ಉತ್ತಮ ಸಿನಿಮಾ, ಉತ್ತಮ ನಿರ್ದೇಶನ ಸಹಿತ 11 ವಿಭಾಗಗಳಲ್ಲಿ ಸ್ಪರ್ಧೆಗೆ ‘ಜೋಕರ್‌’ ನಾಮಕರಣಗೊಂಡಿದೆ. ಎರಡನೇ ಬಾರಿಯ ಬಿಡುಗಡೆಯ ಸಂದರ್ಭದಲ್ಲಿ ‘ಇಂತಿಷ್ಟು ಆಸ್ಕರ್‌ ಪ್ರಶಸ್ತಿಗಳನ್ನು ಬಗಲಿಗೇರಿಸಿಕೊಂಡ’ ಎನ್ನುವ ಟ್ಯಾಗ್‌ಲೈನ್‌ ಚಿತ್ರದ ಜಾಹೀರಾತಿನಲ್ಲಿ ಇರುವುದು ಖಚಿತ!

ಈ ಹಿಂದೆ ಗಾಣಧಿ ಜಯಂತಿಯಂದು (ಅಕ್ಟೋಬರ್‌ 2) ‘ಜೋಕರ್‌’ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆ ಕಂಡಿತ್ತು. ವಿಶ್ವದಾದ್ಯಂತ 100 ಕೋಟಿ ಅಮೆರಿಕನ್‌ ಡಾಲರ್‌ ಬಾಕ್ಸಾಫೀಸ್‌ ಕಲೆಕ್ಷನ್‌ನೊಂದಿಗೆ ದಾಖಲೆ ಬರೆದ ಈ ಸಿನಿಮಾ, ಆಸ್ಕರ್‌ನಲ್ಲಿ ಅತ್ಯಧಿಕ ಪ್ರಶಸ್ತಿಗಳನ್ನು ಗೆದ್ದು ದಾಖಲೆ ನಿರ್ಮಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT