ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕೆ ಎಸ್‌ ಸೇತುಮಾಧವನ್‌ ನಿಧನ

Last Updated 24 ಡಿಸೆಂಬರ್ 2021, 12:26 IST
ಅಕ್ಷರ ಗಾತ್ರ

ತಿರುವನಂತಪುರಂ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಖ್ಯಾತ ಚಿತ್ರ ನಿರ್ದೇಶಕ ಕೆ ಎಸ್ ಸೇತುಮಾಧವನ್ (90) ವಯೋಸಹಜ ಕಾರಣದಿಂದ ಶುಕ್ರವಾರ ಬೆಳಗ್ಗೆ ನಿಧನರಾದರು.

ಮಲೆಯಾಳಂ ಚಿತ್ರರಂಗದವರಾಗಿದ್ದು, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ನಿರ್ದೇಶಿಸಿದ್ದರು. ಕಮಲ್ ಹಾಸನ್ ಅವರನ್ನು 'ಕಣ್ಣುಂ ಕರಳುಂ' ಚಿತ್ರದಲ್ಲಿ ಬಾಲ ನಟನಾಗಿ ಸಿನೆಮಾ ರಂಗಕ್ಕೆ ಪರಿಚಯಿಸಿದ್ದರು. ಬಳಿಕ 'ಕನ್ಯಾಕುಮಾರಿ' ಸಿನಿಮಾದಲ್ಲಿ ಮುಖ್ಯ ಪಾತ್ರ ನೀಡಿದ್ದರು.

ಮಲೆಯಾಳ ಭಾಷೆಯ ಪ್ರಸಿದ್ಧ ಕಾದಂಬರಿಗಳನ್ನು ಸಿನೆಮಾ ಮಾಡಿದ ಶ್ರೇಯಸ್ಸು ಸೇತುಮಾಧವನ್ ಅವರದು. ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ 1931ರಲ್ಲಿ ಜನಿಸಿದ ಸೇತುಮಾಧವನ್‌ ಅವರು ನಿರ್ದೇಶಕ ಕೆ ರಾಮನಾಥ್‌ ಅವರಿಗೆ ಸಹಾಯಕ ನಿರ್ದೇಶಕರಾಗಿ ಚಿತ್ರರಂಗವನ್ನು ಪ್ರವೇಶಿಸಿದರು.

'ಜ್ಞಾನ ಸುಂದರಿ', ಸೇತುಮಾಧವನ್‌ ನಿರ್ದೇಶನದ ಮೊದಲ ಚಿತ್ರ. ಓಡಯಿಲ್‌ನಿನ್ನು, ಅನುಭವಂಗಳ್ ಪಾಳಿಚ್ಚಗಳ್‌, ಓಪ್ಪೋಳ್, ಅರನಾಳಿಕನೇರಂ, ಅಚ್ಚನುಂ ಬಾಪ್ಪಯುಂ ಮತ್ತಿತರ ಚಿತ್ರಗಳು ಪ್ರಸಿದ್ಧಿ ಪಡೆದಿವೆ. 1991ರಲ್ಲಿ ತೆರೆಕಂಡ 'ವೇನಲ್‌ಕಿನಾವುಗಳ್‌' ಸೇತುಮಾಧವನ್‌ ನಿರ್ದೇಶನದ ಕೊನೆಯ ಚಿತ್ರ.

ಸೇತುಮಾಧವನ್‌ ಅವರು ಪತ್ನಿ ವಲ್ಸಲ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT