ಬುಧವಾರ, ಆಗಸ್ಟ್ 10, 2022
21 °C

ಉಪೇಂದ್ರ ನಟನೆಯ ಕಬ್ಜ ಸಿನಿಮಾದ ಶೂಟಿಂಗ್ ಡಿ.20 ರಿಂದ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂದನವನದ ಸೂಪರ್‌ಸ್ಟಾರ್ ಉಪೇಂದ್ರ ಅವರ ಮುಂದಿನ ‘ಕಬ್ಜ’ ಸಿನಿಮಾದ ಕುರಿತು ಉಪೇಂದ್ರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾದ ಕುರಿತ ಪ್ರತಿ ಅ‍ಪ್‌ಡೇಟ್‌ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿರುವುದು ಸುಳ್ಳಲ್ಲ. ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಕಬ್ಜ ಸಿನಿಮಾದ ಶೂಟಿಂಗ್ ಇದೇ 20ರಿಂದ ಪುನಃ ಆರಂಭವಾಗಲಿದೆ. ಅಕ್ಟೋಬರ್‌ನಿಂದ ಸಿನಿಮಾದ ಶೂಟಿಂಗ್ ಆರಂಭವಾಗಬೇಕಿತ್ತು. ಆದರೆ ನಿರ್ದೇಶಕ ಆರ್‌. ಚಂದ್ರು ಹಾಗೂ ಅವರ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಚಿತ್ರೀಕರಣದ ಅವಧಿಯನ್ನು ಮುಂದಕ್ಕೆ ಹಾಕಲಾಯಿತು.

1980ರ ಸಮಯದ ಭೂಗತಲೋಕದ ಕಥೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು 7ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಸಿನಿಮಾ ಶೂಟ್ ಮಾಡಲಾಗುತ್ತದೆ. ಅಲ್ಲದೇ ಮಲಯಾಳಂ, ಹಿಂದಿ, ಮರಾಠಿ ಹಾಗೂ ಬಂಗಾಳಿ ಭಾಷೆಗಳಿಗೆ ಡಬ್‌ ಆಗಲಿದೆ.

ಕಬೀರ್ ದುಹಾನ್ ಸಿಂಗ್‌, ಕೋಟ ಶ್ರೀನಿವಾಸ್ ರಾವ್, ಜಯಪ್ರಕಾಶ್‌, ಕಾತಾ ರಾಜು, ಸುಬ್ಬರಾಜು, ಅವಿನಾಶ್ ಸೇರಿದಂತೆ ವಿವಿಧ ಭಾಷೆಯ ಖ್ಯಾತ ನಟರು ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ‌

ಚಿತ್ರದ ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದ ಇನ್ನೂ ನಾಯಕಿ ಯಾರೆಂಬುದು ಅಂತಿಮವಾಗಿಲ್ಲ. ಆರ್. ಚಂದ್ರು ಹಾಗೂ ಉಪೇಂದ್ರ ಬ್ರಹ್ಮ, ಐ ಲವ್ ಯು ಚಿತ್ರಗಳಲ್ಲಿ ಒಂದಾಗಿ ಕೆಲಸ ಮಾಡಿದ್ದರು. ಈಗ ಮತ್ತೆ ಕಬ್ಜದ ಮೂಲಕ ಈ ಜೋಡಿ ಒಂದಾಗಿದೆ. ಈ ಇಬ್ಬರ ಕಾಂಬಿನೇಷನ್‌ನಲ್ಲಿ ಚಿತ್ರ ಹೇಗೆ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕೆಲದಿನಗಳ ಹಿಂದೆ ಕಬ್ಜ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿತ್ತು ಚಿತ್ರತಂಡ. ಅದರಲ್ಲಿ ಉಪೇಂದ್ರ ಅಂಡರ್‌ವರ್ಲ್ಡ್ ಡಾನ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು