ಮಂಗಳವಾರ, ನವೆಂಬರ್ 19, 2019
29 °C

ಕಾಜಲ್‌ಗೆ ಸುಷ್ಮಾ ಸ್ವರಾಜ್‌ ಬಯೋಪಿಕ್‌ನಲ್ಲಿ ನಟಿಸಲಿಷ್ಟ

Published:
Updated:

 ರಾಜಕಾರಣಿ ಸುಷ್ಮಾ ಸ್ವರಾಜ್‌ ಬಯೋಪಿಕ್‌ನಲ್ಲಿ ನಟಿಸುವ ಇಂಗಿತವನ್ನು ನಟಿ ಕಾಜಲ್‌ ಅಗರ್‌ವಾಲ್‌ ವ್ಯಕ್ತಪಡಿಸಿದ್ದಾರೆ.

 ಇತ್ತೀಚೆಗೆ ತೆಲುಗು ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ಕಾಜಲ್‌ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಯಾರ ಬಯೋಪಿಕ್‌ನಲ್ಲಿ ನಟಿಸಲು ಇಷ್ಟ ಎಂಬ ಪ್ರಶ್ನೆಗೆ, ಸುಷ್ಮಾ ಸ್ವರಾಜ್‌ ಎಂದು ಉತ್ತರಿಸಿದ್ದಾರೆ.

‘ಭಾರತ ಕಂಡ ಶ್ರೇಷ್ಠ ನಾಯಕಿಯರಲ್ಲಿ ಅವರೂ ಒಬ್ಬರು. ಅವರ ಬಯೋಪಿಕ್‌ನಲ್ಲಿ ಅವರ ಪಾತ್ರ ಮಾಡುವ ಅವಕಾಶ ನನ್ನದಾಗಲಿ’ ಎಂದು ಉತ್ತರಿಸಿದ್ದಾರೆ.

 ‘ಇಂಡಸ್ಟ್ರಿಯಲ್ಲಿ ತಮನ್ನಾ ಹಾಗೂ ರಾನಾ ದಗ್ಗುಬಾಟಿ ನನ್ನ ಸ್ನೇಹಿತರು’ ಎಂದು ಹೇಳಿಕೊಂಡಿರುವ ಅವರು, ‘ರಾನಾ ದಗ್ಗುಬಾಟಿ ಹಾಗೂ ನಾನು ಆಗಾಗ ಹೊಸ ಪುಸ್ತಕಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುತ್ತೇವೆ’ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಅವಕಾಶ ಸಿಕ್ಕರೆ ಪ್ರಭಾಸ್‌ನನ್ನೂ ಮದುವೆಯಾಗ್ತೀನಿ ಎಂದು ತಮಾಷೆ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)