ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಡ್ರೆಸ್ಸಿಂಗ್ ಸೆನ್ಸ್‌' ಬಗ್ಗೆ ರಣವೀರ್‌ ಸಿಂಗ್‌ಗೆ ಪಾಠ ಮಾಡಿದ ಕಂಗನಾ ರನೌತ್‌

Published 29 ಜುಲೈ 2023, 11:00 IST
Last Updated 29 ಜುಲೈ 2023, 11:00 IST
ಅಕ್ಷರ ಗಾತ್ರ

ರಣವೀರ್‌ ಸಿಂಗ್‌ ಮತ್ತು ಆಲಿಯಾ ಭಟ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಕೌಟುಂಬಿಕಾ ಕಥಾ ಹಿನ್ನೆಲೆ ಹೊಂದಿರುವ 'ರಾಕಿ ಜೌರ್‌ ರಾಣಿ ಕಿ ಪ್ರೇಮ್‌ ಕಹಾನಿ' ಚಿತ್ರ ತೆರೆಗೆ ಬಂದಿದ್ದು, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿರುವ ಬಾಲಿವುಡ್‌ ನಟಿ ಕಂಗನಾ ರನೌತ್‌, 'ಡ್ರೆಸ್ಸಿಂಗ್‌ ಸೆನ್ಸ್‌' ಬಗ್ಗೆ ನಟ ರಣವೀರ್‌ ಸಿಂಗ್‌ಗೆ ಪಾಠ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ ರನೌತ್‌, ರಣವೀರ್‌ ಸಿಂಗ್‌ ಅವರನ್ನು ಕಾರ್ಟೂನ್‌ಗೆ ಹೋಲಿಸಿದ್ದಾರೆ. ಕರಣ್‌ ಜೋಹರ್‌ನಿಂದ ಪ್ರಭಾವಿತರಾಗುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.

'ಕರಣ್‌ ಜೋಹರ್‌ ಅವರಿಂದ ಮತ್ತು ಅವರ ಡ್ರೆಸ್ಸಿಂಗ್‌ ಸೆನ್ಸ್‌ನಿಂದ ಪ್ರಭಾವಿತರಾಗುವುದನ್ನು ನಿಲ್ಲಿಸುವಂತೆ ರಣವೀರ್‌ ಸಿಂಗ್‌ ಅವರಲ್ಲಿ ಕೇಳಿಕೊಳ್ಳುತ್ತೇನೆ. ಹಿರಿಯ ನಟರಾದ ಧರ್ಮೇಂದ್ರ, ವಿನೋದ್‌ ಖನ್ನಾ ಅವರು ತಮ್ಮ ಕಾಲದಲ್ಲಿ ಹೇಗೆ ಶಿಸ್ತಿನಿಂದ ಬಟ್ಟೆ ಧರಿಸುತ್ತಿದ್ದರೋ ಹಾಗೆ ನೀವು(ರಣವೀರ್‌ ಸಿಂಗ್‌) ಧರಿಸಬೇಕು ಎಂದು ಸಲಹೆ ನೀಡುತ್ತೇನೆ' ಎಂದು ಹೇಳಿದ್ದಾರೆ.

'ತನ್ನನ್ನು ತಾನು ಹೀರೋ ಎಂದು ಕರೆದುಕೊಂಡು ಕಾರ್ಟೂನ್‌ ತರಹ ಕಾಣಿಸಿದರೆ ಜನರಿಗೆ ಗುರುತಿಸಲು ಕಷ್ಟವಾಗುತ್ತದೆ. ದಕ್ಷಿಣ ಭಾರತದ ಚಿತ್ರರಂಗದ ಹೀರೋಗಳು ತಮ್ಮ ಉಡುಪನ್ನು ಘನತೆ, ಗೌರವದಿಂದ ಧರಿಸುತ್ತಾರೆ. ನಮ್ಮ ದೇಶದ ಸಂಸ್ಕೃತಿಯನ್ನು ಅವರು ಕಾಪಾಡಿಕೊಂಡು ಬಂದಿದ್ದಾರೆ. ಅವರನ್ನು ನೋಡಿಯಾದರೂ ಕಲಿಯಬೇಕಿದೆ' ಎಂದು ಹೇಳಿದ್ದಾರೆ.

ಧಾರವಾಹಿಯಂತಹ ಸಾಮಾನ್ಯ ಚಿತ್ರ ತೆಗೆಯುವುದಕ್ಕೆ ₹250 ಕೋಟಿ ವೆಚ್ಚ!

'ರಾಕಿ ಜೌರ್‌ ರಾಣಿ ಕಿ ಪ್ರೇಮ್‌ ಕಹಾನಿ' ಚಿತ್ರವನ್ನು ಟೀಕಿಸಿರುವ ಕಂಗನಾ ಚಿತ್ರವನ್ನು ಧಾರವಾಹಿಗೆ ಹೋಲಿಸಿದ್ದಾರೆ. 'ನೆಪೋ ಗ್ಯಾಂಗ್‌ಗಳು ನಟಿಸಿರುವ ಧಾರವಾಹಿಯಂತಹ ಸಾಮಾನ್ಯ ಚಿತ್ರಕ್ಕೆ ₹250 ಕೋಟಿ ಖರ್ಚು ಮಾಡಿರುವುದು ಏಕೆ?' ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನಿವೃತ್ತಿ ಪಡೆಯುವ ಕಾಲ ಬಂದಿದೆ ಎಂದು ಕರಣ್‌ ಜೋಹರ್‌ ಅವರನ್ನು ಚುಚ್ಚಿದ್ದಾರೆ.

ಕಂಗನಾ ರನೌತ್‌ ಇನ್‌ಸ್ಟಾಗ್ರಾಂ ಸ್ಟೋರಿ
ಕಂಗನಾ ರನೌತ್‌ ಇನ್‌ಸ್ಟಾಗ್ರಾಂ ಸ್ಟೋರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT