ಬುಧವಾರ, ಜೂನ್ 3, 2020
27 °C

ಹಾಸ್ಯನಟ ಮೈಕಲ್ ಮಧು ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಾಸ್ಯನಟ ಮೈಕಲ್ ಮಧು ಅವರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.

ಮಧು ಇಂದು ಮಧ್ಯಾಹ್ನ ಊಟ ಮಾಡಿದ ಬಳಿಕ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಕೂಡಲೇ ಅವರನ್ನು ನಗರದ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಓಂ, ಎಕೆ 47, ಸೂರ್ಯವಂಶ, ನೀಲಾಂಬರಿ, ಯಮಲೋಕದಲ್ಲಿ ವೀರಪ್ಪನ್, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು, ಸುಪ್ರಭಾತ, ಮಿನುಗುತಾರೆ, ಪಾಪಿಗಳ ಲೋಕದಲ್ಲಿ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

ನೃತ್ಯ ನಿರ್ದೇಶಕರಾಗುವ ಕನಸು ಕಂಡಿದ್ದ ಮಧು ಬಳಿಕ ನಟರಾಗಿದ್ದರು. ಚೆನ್ನಾಗಿ ನೃತ್ಯ ಮಾಡುತ್ತಾರೆ ಎಂಬ ಕಾರಣಕ್ಕೆ ಅವರ ಹೆಸರಿನ ಮುಂದೆ ‘ಮೈಕಲ್‌’ (ಖ್ಯಾತ ಪಾಪ್‌ಗಾಯಕ ಮೈಕಲ್‌ ಜಾಕ್ಸನ್‌ ಅವರ ಹೆಸರಿನ ಮೊದಲ ಪದ) ಸೇರಿಕೊಂಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು