ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅದ್ದೂರಿ ಲವರ್‌’ ವಿರಾಟ್‌ಗೆ ಅದೃಷ್ಟ

Last Updated 20 ಏಪ್ರಿಲ್ 2020, 19:38 IST
ಅಕ್ಷರ ಗಾತ್ರ

ಎ.ಪಿ. ಅರ್ಜುನ್‌ ನಿರ್ದೇಶನದ ‘ಕಿಸ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕ್ಯೂಟ್‌ ಜೋಡಿಗೆ ಈಗ ಅದೃಷ್ಟ ಖುಲಾಯಿಸಿದೆ. ಜರ್ಮನಿಯಲ್ಲಿ ಸಿಕ್ಕಿದ್ದ ಕೈತುಂಬ ಸಂಬಳದ ಉದ್ಯೋಗ ಕೈಬಿಟ್ಟು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ವಿರಾಟ್‌ ‘ಕಿಸ್‌’ ಚಿತ್ರದಲ್ಲಿನಾಯಕನಾಗಿ ನಟಿಸಿದ್ದರು. ಇವರ ಚೊಚ್ಚಲ ಸಿನಿಮಾ ನೂರು ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಈಗಮತ್ತೊಂದು ‘ಅದ್ದೂರಿ ಲವರ್‌’ ಚಿತ್ರದಲ್ಲಿ ನಾಯಕನಾಗುವ ಅವಕಾಶ ವಿರಾಟ್‌ಗೆಸಿಕ್ಕಿದೆ. ಹಾಗೆಯೇ ‘ಕಿಸ್‌’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ ಶ್ರೀಲೀಲಾ ಎರಡೇ ವರ್ಷಗಳಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

‘ಕಿಸ್‌’ ಯಶಸ್ಸಿನ ಬೆನ್ನಲ್ಲೇ ಎ.ಪಿ. ಅರ್ಜುನ್‌ ಮತ್ತೊಂದು ‘ಅದ್ದೂರಿ ಲವ್‌’ ಸ್ಟೋರಿಯ ಚಿತ್ರಕ್ಕೆ ಸದ್ದಿಲ್ಲದೆ ಅಣಿಯಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯವೂ ಅವರದ್ದೇ. ಅರ್ಜುನ್‌ ಜತೆಗೆ ಈ ಹಿಂದೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಭರತ್‌ ‘ಅದ್ದೂರಿ ಲವರ್‌’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಈ ಚಿತ್ರಕ್ಕೆ ಅರ್ಜುನ್‌ ಬಂಡವಾಳ ಹೂಡಲಿದ್ದಾರೆ.

‘ಅದ್ದೂರಿ ಲವರ್‌’ಗೆ ನಾಯಕಿಯಾಗಿ ‘ಸಲಗ’ದ ಸಂಜನಾ ಆನಂದ್ ನಟಿಸಲಿದ್ದಾರೆ. ಸಂಜನಾ ಅವರದು ಬಬ್ಲಿ, ಕ್ಯೂಟ್‌ ಹುಡುಗಿಯ ಪಾತ್ರ. ಆದರೆ, ವಿರಾಟ್‌ ಅವರದು ತುಂಟ ಮತ್ತು ತರಲೆ ಹುಡುಗನ ಪಾತ್ರ. ಕಾಲೇಜು ಹುಡುಗನಾಗಿ ಕಾಣಿಸಿಕೊಳ್ಳುವ ವಿರಾಟ್‌ ತನ್ನ ಪ್ರೀತಿ ಎಷ್ಟೊಂದು ಅದ್ದೂರಿ ಎನ್ನುವುದನ್ನು ತೆರೆಮೇಲೆಸಾಧಿಸಲಿದ್ದಾರಂತೆ.

‘ಕಿಸ್‌’ ಚಿತ್ರದಲ್ಲಿ ವಿರಾಟ್‌ ಮತ್ತು ಶ್ರೀಲೀಲಾ ಜೋಡಿ ಯುವಮನಸುಗಳನ್ನು ಮೋಡಿ ಮಾಡಿತ್ತು. ಈಗ ವಿರಾಟ್‌ ಮತ್ತು ಸಂಜನಾ ಆನಂದ್‌ ಜೋಡಿ ಪರಿಶುದ್ಧ ಪ್ರೇಮಕಥೆಯ ‘ಅದ್ದೂರಿ ಲವರ್‌’ನಲ್ಲಿಯುವ ಮನಸುಗಳನ್ನು ಮತ್ತು ಭಾವುಕ ಕ್ಷಣಗಳಿಂದ ಕುಟುಂಬ ಪ್ರೇಕ್ಷಕರನ್ನೂ ಏಕಕಾಲಕ್ಕೆ ಮನಗೆಲ್ಲುವ ನಿರೀಕ್ಷೆ ಹುಟ್ಟುಹಾಕಿದೆ.

ಚಿತ್ರಕ್ಕೆ ಮುಹೂರ್ತ ನಡೆದಿದ್ದು, ಏಪ್ರಿಲ್‌ ಮೊದಲ ವಾರ ಚಿತ್ರೀಕರಣ ಆರಂಭವಾಗಬೇಕಿತ್ತು. ಆಸ್ಟ್ರೇಲಿಯಾ, ಬೆಂಗಳೂರು, ಮೈಸೂರು, ಮಡಿಕೇರಿ ಕಡೆಗಳಲ್ಲಿ 80ರಿಂದ 100 ದಿನಗಳವರೆಗೆ ಚಿತ್ರೀಕರಿಸುವ ಯೋಜನೆ ಚಿತ್ರತಂಡದ್ದು. ಕೊರೊನಾ ಕಾರಣಕ್ಕೆ ಚಿತ್ರೀಕರಣ ಮುಂದೂಡಲ್ಪಟ್ಟಿದೆ. ವಿದೇಶಕ್ಕೆ ಹೋಗುವ ಯೋಜನೆಯೂ ಅನಿಶ್ಚಿತವಾಗಿದೆ. ಲಾಕ್‌ಡೌನ್‌ ಮುಗಿದ ಮೇಲೆ ಚಿತ್ರೀಕರಣ ಶುರುವಾಗುವ ನಿರೀಕ್ಷೆ ಇದೆಎನ್ನುವ ಮಾತು ಸೇರಿಸಿದರು ವಿರಾಟ್‌.

ಎ.ಪಿ. ಅರ್ಜುನ್‌ ಜತೆಗಿನ ಕಾಂಬಿನೇಷನ್‌ ಬಗ್ಗೆ ಕೇಳಿದಾಗ, ‘ಅರ್ಜುನ್‌ ಸರ್‌ ನನ್ನ ಮೆಂಟರ್‌. ನನ್ನ ಗುರು. ನನಗೆ ರಕ್ತ ಸಂಬಂಧಿಗಿಂತ ಹೆಚ್ಚು. ಅವರು ತೋರಿದ ದಾರಿಯಲ್ಲಿ ನಡೆಯುತ್ತಿದ್ದೇನೆ. ನಾನು ಬಿಟ್ಟು ಬಂದ ಉದ್ಯೋಗದ ಬಗ್ಗೆಯೂ ನಿರಾಸೆ ಇಲ್ಲ. ಐಐಟಿಯಲ್ಲಿ ಓದಿ ಚಿತ್ರರಂಗಕ್ಕೆ ಬಂದ ಬಗ್ಗೆ ಪಶ್ಚಾತ್ತಾಪವೂಇಲ್ಲ. ಓದು, ಶಿಕ್ಷಣ ಜ್ಞಾನಾರ್ಜನೆಗೆ ಅಷ್ಟೇ. ಆದರೆ, ನಾವು ಯಾವಾಗಲು ನಮ್ಮ ಆಸಕ್ತಿ ಮತ್ತು ಇಷ್ಟದ ಕೆಲಸ ಮಾತ್ರ ಮಾಡಬೇಕು ಎನ್ನುವುದು ನನ್ನ ನಂಬಿಕೆ. ನನ್ನ ಮೊದಲ ಚಿತ್ರವನ್ನು ಕನ್ನಡ ಪ್ರೇಕ್ಷಕರು ನೂರು ದಿನಗಳನ್ನು ದಾಟಿಸಿ, ಯಶಸ್ಸು ಕೊಟ್ಟಿದ್ದಾರೆ. ಇದಕ್ಕಿಂತ ತೃಪ್ತಿ, ಸಾರ್ಥಕತೆ ಬೇರೇನೂ ಬೇಡ’ ಎನ್ನುವುದು ವಿರಾಟ್‌ ಅವರ ವಿನಮ್ರ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT